

ಚಾಮರಾಜನಗರ: ರೋಟರಿ ಸಂಸ್ಥೆ ಹಾಗೂ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ನಗರದ ರೋಟರಿ ಭವನದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ 185 ಜನ ಸದುಪಯೋಗಪಡೆದುಕೊಂಡರು.
ಬೆಳಗ್ಗೆ 8.30ರಿಂದ ಪ್ರಾರಂಭವಾದ ಶಿಬಿರದಲ್ಲಿ ಕಿರಿಯ ವಯಸ್ಸಿನವರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ದೃಷ್ಟಿಯಲ್ಲಿ ಅಲ್ಪ ದೋಷಗಳು ಕಂಡು ಬಂದವರಿಗೆ ಉಚಿತವಾಗಿ ಔಷಧ ನೀಡಲಾಯಿತು.
ಕಣ್ಣಿನ ಪೊರೆ ಹಾಗೂ ಹೆಚ್ಚಿನ ಸಮಸ್ಯೆವುಳ್ಳ 64 ಜನರನ್ನು ಗುರುತಿಸಿ, ಕೊಯಮತ್ತೂರಿನ ಕಣ್ಣಿನ ಆಸ್ಪತ್ರೆಗೆ ಚಿಕಿತ್ಸಗಾಗಿ ಕೆರೆದೊಯ್ಯಲಾಯಿತು. ಚಿಕಿತ್ಸೆ, ಊಟ, ಉಳಿದುಕೊಳ್ಳಲು ಸ್ಥಳ, ಹೋಗಿ ಬರುವ ಖರ್ಚು ಎಲ್ಲವನ್ನೂ ಉಚಿತವಾಗಿ ಕಲ್ಪಿಸಲಾಗಿದೆ.
ಶಿಬಿರದಲ್ಲಿ ಡಾ.ನೂಪೂರ್ ದುಭೆ, ಡಾ.ಗುರುನಿಷೆ ಸೇರಿದಂತೆ 15 ಜನರನ್ನೊಳಗೊಂಡ ವೈದ್ಯರ ತಂಡ ತಪಾಸಣೆಯಲ್ಲಿ ಭಾಗವಹಿಸಿತ್ತು. ರೋಟರಿ ಸಂಸ್ಥೆ ಅಧ್ಯಕ್ಷ ಆರ್.ಎಂ.ಸ್ವಾಮಿ, ಕಾರ್ಯದರ್ಶಿ ಮಹದೇವಸ್ವಾಮಿ, ಸದಸ್ಯರಾದ ಎಲ್.ನಾಗರಾಜು, ನಾರಾಯಣ್, ಚಂದ್ರಶೇಖರ್, ಯೋಗರಾಜ್ ಇದ್ದರು.