ನೇತ್ರ ದಾನ ಮಾಡುವುದು ಸಂಪ್ರದಾಯವಾಗಲಿ

27mnv01
Published on

ಮಾನ್ವಿ: ನಮ್ಮ ಕಣ್ಣುಗಳು ಸದಾ ಜಗತ್ತನ್ನು ನೋಡಬೇಕಾದರೆ ನೇತ್ರದಾನ ಮಾಡಬೇಕು. ಅಂಧರ ಬಾಳಿಗೆ ಬೆಳಕು ನೀಡಲು ಪ್ರತಿಯೊಬ್ಬರೂ ಮುಂದೆ ಬರಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಹೇಳಿದರು.

ನಕ್ಕುಂದಿ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಂಧತ್ವ ನಿಯಂತ್ರಣ ವಿಭಾಗದಿಂದ ಆಯೋಜಿಸಿದ್ದ ನೇತ್ರದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ನೇತ್ರದಾನ ಪ್ರತಿ ಕುಟುಂಬದ ಸಂಪ್ರದಾಯವಾಗಲಿ. ಮರಣದ ಹೊಂದಿದ 5 ಗಂಟೆಯೊಳಗೆ ನೇತ್ರ ಸಂಗ್ರಹ ಪ್ರಕ್ರಿಯೆ ನಡೆಯಲಿದೆ ಎಂದರು.

ನೇತ್ರಾಧಿಕಾರಿ ಯಲ್ಲಪ್ಪ ಕಂಡಗೊಳ್ಳಿ ಮಾತನಾಡಿ, ಕಣ್ಣುಗಳನ್ನು ನಿಯಮಿತವಾಗಿ ವೈದ್ಯರಿಂದ ಪರೀಕ್ಷಿಸಿಕೊಳ್ಳಬೇಕು. ನೇತ್ರ ಸಂಗ್ರಹ ಪ್ರಕ್ರಿಯೆ ಕೇವಲ 20 ನಿಮಿಷಗಳಲ್ಲಿ ಮುಗಿಯಲಿದೆ. 1.25 ಲಕ್ಷ ಅಂಧರು ನೇತ್ರಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಿವಮ್ಮ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net