

ಯಳಂದೂರು: ನರೇಂದ್ರಮೋದಿ ಅವರ 73ನೇ ಹುಟ್ಟುಹಬ್ಬದ ಅಂಗವಾಗಿ 7 ಜನರು ನೇತ್ರದಾನ ಮಾಡುವ ಒಪ್ಪಿಗೆ ಪತ್ರಕ್ಕೆ ಶುಕ್ರವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸಹಿ ಹಾಕಿದರು.
ಮಾಜಿ ಶಾಸಕ ಎಸ್.ಬಾಲರಾಜ್ ಮಾತನಾಡಿ, ಮನುಷ್ಯ ಸತ್ತ ಮೇಲೂ ಬದುಕಲು ಹಲವು ಮಾರ್ಗಗಳಿದ್ದು, ಅದರಲ್ಲಿ ದೇಹ ಹಾಗೂ ನೇತ್ರದಾನ ಪ್ರಮುಖವಾದವು. ಹಾಗಾಗಿ ನಾವು ಸತ್ತ ಮೇಲೂ ಬದುಕಬೇಕೆಂದರೆ ಇಂತಹ ಕಾರ್ಯಗಳಲ್ಲಿ ಭಾಗಿಯಾಗಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ಶ್ರೀಧರ್ ಮಾತನಾಡಿ, ಬೇರಯವರ ಬದುಕಿನಲ್ಲಿ ಹೊಸ ಬೆಳಕು ಮೂಡಿಸುವ ಕೆಲಸವನ್ನು ಮಾಡಿದಾಗ ಜೀವನ ಸಾರ್ಥಕ ಎಂದರು.
ತಾಲೂಕಿನ ವೆಂಕಟೇಶ್, ದಿಲೀಪ್‌ಕುಮಾರ್, ರೇವಣ್ಣ, ರಾಜರಾಜೇಶ್ವರಿ, ಅಗರರಾಜು, ಬಸವಣ್ಣ, ರವಿಕುಮಾರ್ ಸೇರಿದಂತೆ ಒಟ್ಟು 7 ಜನರು ನೇತ್ರದಾನ ಮಾಡಲು ಪತ್ರಕ್ಕೆ ಸಹಿ ಮಾಡಿದರು. ಬಿಜೆಪಿ ಎಸ್‌ಟಿ ಮೋರ್ಚಾ ಕಾರ್ಯಕಾರಣಿ ಸದಸ್ಯ ಅಗರ ರಾಜು, ಮುಖಂಡರಾದ ಬೂದಿತಿಟ್ಟು ನಾಗರಾಜು, ಜಗದೀಶ್, ಡಾ.ನಾಗೇಂದ್ರಮೂರ್ತಿ, ಡಾ.ಶಶಿಕಲಾ, ಸಿಬ್ಬಂದಿ ಸೋಮಣ್ಣ, ಮದ್ದೂರು ರೇವಣ್ಣ ಇತರರು ಹಾಜರಿದ್ದರು.