

ಕೊಪ್ಪಳ: ರಾಷ್ಟ್ರೀಯ ನೇತ್ರದಾನ ಪಾಕ ಅಂಗವಾಗಿ ಎಂಎಂ ಜೋಶಿ ಆಸ್ಪತ್ರೆಯಿಂದ ಸೋಮವಾರ ನಗರದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಯಾರ್ಬಿ ಡೆಪ್ಯೂಟಿ ಕಮಾಂಡೆಂಟ್, ಮುಖಂಡ ಶಾಂತಣ್ಣ ಮುದಗಲ್ ಜಾಥಾಗೆ ಚಾಲನೆ ನೀಡಿದರು.
ರೆಡ್ಕ್ರಾಸ್, ಇನ್ನರ್ ವ್ಹೀಲ್ ಕ್ಲಬ್, ಅರೆ ವೈದ್ಯಕಿಯ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಆಂಗ್ಲ ಮಾಧ್ಯಮ ಶಾಲಾ ಮಕ್ಕಳು ಜಾಥಾದಲ್ಲಿ ಭಾಗಿಯಾದರು. ಗವಿಮಠದಿಂದ ಎಂಎಂ ಜೋಶಿ ಆಸ್ಪತ್ರೆವರೆಗೆ ಜಾಥಾ ಸಾಗಿತು. ನೇತ್ರದಾನ ಕುರಿತು ಘೋಷಣೆ ಕೂಗಿ ಅರಿವು ಮೂಡಿಸಲಾಯಿತು. ಎಸ್ಜಿಎಂ ನೇತ್ರ ಭಂಡಾರ ನಿರ್ದೇಶಕ ಡಾ.ಅನಿಕೇತ ಶಾಸ್ತ್ರಿ ಮಾತನಾಡಿ, ಕೊಪ್ಪಳದ ಎಂಎಂ ಜೋಶಿ ಆಸ್ಪತ್ರೆಯಲ್ಲಿ ರೆಡ್ಕ್ರಾಸ್ ಸಹಯೋಗದೊಂದಿಗೆ 24*7 ಲಭ್ಯವಾಗುವಂತೆ ನೇತ್ರ ಸಂಗ್ರಹಣಾ ಕೇಂದ್ರ ತೆರೆಯಲಾಗಿದೆ ಎಂದರು.
ಸಿಇಒ ಕುತುದ್ದೀನ್ ಮುಲ್ಲಾ, ಎಂಎಂ ಜೋಶಿ ಕೊಪ್ಪಳ ಶಾಖೆ ತಜ್ಞ ಡಾ.ವಿಕಾಸ ಐಲಿ, ಡಾ.ವಾಗೀಶ ತೆಗ್ಗಿನಕೇರಿ, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆಯ ಡಾ.ಪ್ರಕಾಶ ಎಚ್. ಇತರರು ಭಾಗಿಯಾದರು.