ಎಂ.ಎ೦. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಿ೦ದ ನೇತ್ರದಾನ ಅರಿವು

27 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ನಗರದ ಸಾಯಿ ನಿಕೇತನ ಕಾಲೇಜಿನ ವಿದ್ಯಾರ್ಥಿಗಳಿಗೆ ಇಲ್ಲಿನ ಎಂ.ಎA. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಿ೦ದ ಮಂಗಳವಾರ ನೇತ್ರದಾನದ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎಂ.ಎ೦. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಗ್ಲುಕೊಮಾ ವಿಭಾಗದ ವೈದ್ಯೆ ಡಾ. ಪ್ರಿಯಾ೦ಕಾ ಗುಮಾಸ್ತೆ ಮಾತನಾಡಿ, ನೇತ್ರದಾನದ ಪ್ರಕ್ರಿಯೆ ಕೇವಲ 10ರಿಂದ 15 ನಿಮಿಷ ಇರುತ್ತದೆ. ನೇತ್ರದಾನವನ್ನು ಮರಣಾನಂತರ ಮಾತ್ರ ಮಾಡಬಹುದು. ಇದರಿಂದ ಮೃತ ವ್ಯಕ್ತಿಯ ಮುಖ ವಿಕಾರವಾಗುವುದಿಲ್ಲ. ವ್ಯಕ್ತಿಯ ಮರಣದ ನಂತರ 4ರಿಂದ 6 ಗಂಟೆಯೊಳಗೆ ಕುಟುಂಬಸ್ಥರು ಎಸ್.ಜಿ.ಎಂ. ಐ ಬ್ಯಾಂಕ್ ಅಥವಾ ಸಮೀಪದ ಐ ಬ್ಯಾಂಕ್‌ಗೆ ಕರೆ ಮಾಡಿ ತಿಳಿಸಿ ನೇತ್ರದಾನ ಮಾಡಬಹುದು. ಇದರಿಂದ ಅಂಧ ವ್ಯಕ್ತಿಯ ಬಾಳಿಗೆ ಬೆಳಕಾಗಬಹುದು ಎಂದರು.
ಸಾಯಿ ನಿಕೇತನ ಕಾಲೇಜಿನ ಪ್ರಾಚಾರ್ಯ ವಿವೇಕ್ ನಾಯಕ ಮಾತಾನಾಡಿ, ನೇತ್ರದಾನದ ಮಹತ್ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು. ಇತರರನ್ನು ಪ್ರೇರೇಪಿಸಬೇಕು ಎಂದರು.
ಹರೀಶ ಮುಂಜಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net