ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ, ನೇತ್ರದಾನಕ್ಕೆ ಜಿಲ್ಲಾಧಿಕಾರಿಗಳು ನೋಂದಣೆ

netradana pakshika photo 31-8-2023
Published on

ಗದಗ : ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿದ ಜಿಲ್ಲಾಧಿಕಾರಿಗಳಾದ ವೈಶಾಲಿ ಎಂ ಎಲ್ ಅವರು ನೇತ್ರದಾನಕ್ಕೆ ನೋಂದಣೆ ಮಾಡಿಕೊಂಡರು.ತಮ್ಮ ಒಪ್ಪಿಗೆ ಪತ್ರವನ್ನು ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ ಡಾ. ರಾಜೇಂದ್ರ ಬಸರಿಗಿಡದ ಅವರಿಗೆ ಹಸ್ತಾಂತರಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಜರುಗಿದ ಈ ಕಾರ್ಯಕ್ರಮದಲ್ಲಿ   ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಮಾತನಾಡಿ  ಅಗಸ್ಟ 25 ರಿಂದ ಸೆಪ್ಟಂಬರ್ 08 ರವರೆಗೆ 38 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ  ನೇತ್ರದಾನ ನೋಂದಣೆ  ಶಿಬಿರಗಳನ್ನು  ಆಯೋಜಿಸಲಾಗುವುದು ಎಂದು  ತಿಳಿಸಿದರು.

ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ರಾಜೇಂದ್ರ ಬಸರಿಗಿಡದ ಅವರು ಮಾತನಾಡಿ ನೇತ್ರದಾನ ಮಾಡುವುದು ಮರಣಾ ನಂತರವೇ ನಮ್ಮ ನೇತ್ರಗಳು ಸದಾ ಜಿವಂತವಾಗಿರಲು. ಜಿಲ್ಲೆಯ ಎಲ್ಲರೂ ನೇತ್ರದಾನಕ್ಕೆ ನೋಂದಣೆ ಮಾಡಬೇಕೆಂದು ತಿಳಿಸಿದರು.ಅಂದಾಜು 1.25 ಲಕ್ಷ ಜನರು ಕಾರ್ನಿಯಾ ಸಂಬಂದಿ ಅಂಧತ್ವ ದಿಂದ ಬಳಲುತ್ತಿದ್ದಾರೆ ದಾನಕ್ಕಾಗಿ ಕಾಯುತ್ತಿರುತ್ತಾರೆ. ಒಬ್ಬ ವ್ಯಕ್ತಿ ದಾನ ಮಾಡಿದ ನೇತ್ರಗಳು ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಟಿ ಮರಳಿ ನೀಡುತ್ತದೆ ಎಂದರು.

ಸಮೀಪದ ಸರಕಾರಿ ಆಸ್ಪತ್ರೆಗಳಲ್ಲಿ ಅಥವಾ ದಿನದ  24*7 ಉಚಿತ ಸಹಾಯವಾಣೆ 104. ರಾಷ್ಟ್ರೀಯ ಸಹಾಯವಾಣೆ 1800-11-4770ಕ್ಕೆ ಕರೆ ಮಾಡಿ ನೇತ್ರದಾನ ಮಾಡಿಕೊಳ್ಳಬಹುದು.   ವೆಬ್‍ಸೈಟ್‍ನಲ್ಲಿ ನೋಂದಣೆ : ಜಿವ ಸಾರ್ಥಕತೆ ವೆಬ್ ಸ್ಶೆಟ್ (https://www.jeevasarthakathe.karnataka.gov.in)  ಮೂಲಕ ಸುಲಭದಲ್ಲಿ ನೋಂದಣೆ ಮಾಡಬಹುದಾಗಿದೆ  ಎಂದರು.

ತಾಲೂಕ ಆಸ್ಪತ್ರೆ  ನೇತ್ರ ತಜ್ಞರಾದ ಡಾ. ಪ್ರೀತಿ ಬಿರಾದರ ಮಾತನಾಡಿ ನೇತ್ರಧಾನ ನೋಂದಣೆ ಮತ್ತು ವಿತರಣೆ ಉಚಿತ ಸೇವೆ ನೇತ್ರ ಸಂಗ್ರಹಣೆಗೆ ಬೇಕಾಗುವ ಸಮಯ ಕೇವಲ 20 ನಿಮಿಷಗಳು ನೇತ್ರ ಸಂಗ್ರಹಣೆಯ ನಂತರ ಮೃತರ ಮುಖ ವಿಕಾರವಾಗುವುದಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ನೇತ್ರ ತಜ್ಞರು ಹಾಗೂ ಜಿಲ್ಲೆಯ ಎಲ್ಲಾ ನೇತ್ರಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net