

ವಿಜಯಪುರ: ಮಕ್ಕಳು ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಮೊಬೈಲ್ ಬಳಕೆ ಮಾಡುವುದರಿಂದ ಅವರ ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಜತೆಗೆ ಮಕ್ಕಳಲ್ಲಿ ದೂರದೃಷ್ಟಿ ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತಿವೆ ಎಂದು ಅನುಗ್ರಹ ಆಸ್ಪತ್ರೆಯ ನೇತ್ರ ತಜ್ಞ ಡಾ. ಸಂತೋಷ ಪಾಟೀಲ ಕಳವಳ ವ್ಯಕ್ತಪಡಿಸಿದರು.
ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅನುಗ್ರಹ ವ್ಹಿಜನ್ ಫೌಂಡೇಶನ್ ಟ್ರಸ್ಟ್, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮತ್ತು ಇನ್ನರ್ ವ್ಹೀಲ್ ಕ್ಲಬ್ ವಿಜಯಪುರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ನೇತ್ರ ತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳು ಅತಿ ಹತ್ತಿರದಿಂದ ಮೊಬೈಲ್ ವೀಕ್ಷಿಸುವುದರಿಂದ ತಲೆನೋವು ಬಂದು ಬೇಗನೆ ಅವರಿಗೆ ಸುಸ್ತು ಆವರಿಸುತ್ತಿದೆ. ಅದರಿಂದ ದ್ಯಾಭ್ಯಾಸದಲ್ಲಿ ಕಲಿಕಾ ಆಸಕ್ತಿ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಮಕ್ಕಳು ಹೆಚ್ಚಾಗಿ ಹೊರಗಡೆಯ ಪದಾರ್ಥಗಳನ್ನು ಸೇವಿಸಲು ಮುಂದಾಗುತ್ತಿದ್ದಾರೆ. ಪೋಷಕರು ಮನೆಯಲ್ಲಿಯೇ ಇಷ್ಟವಾಗುವ ಆಹಾರ ತಯಾರಿಸಿ ಕೊಡುವುದು ಮತ್ತು ವಿಟೈಮಿನ್ ಎ ಇರುವಂತ ಗಜ್ಜರಿ, ಹಾಲು, ಹಣ್ಣು, ಮೊಸರು ಸೇರಿ ಕಾಯಿಪಲ್ಯೆ ಪದಾರ್ಥಗಳನ್ನು ನೀಡಬೇಕು. ಅದರಿಂದ ಕಣ್ಣಿನ ಬೆಳವಣಿಗೆಗೆ ಸಹಾಯವಾಗಲಿದೆ ಎಂದರು.
ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ನಿರ್ಮಲಾ ದೊಡಮನಿ, ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯನ್ನು ದತ್ತು ಪಡೆದು ಮಾತನಾಡಿ, ಶಾಲಾ ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ 1 ಲ ರೂಗಳ ವೆಚ್ಚದಲ್ಲಿ ಗಣಿತ ಮತ್ತು ವಿಾನ ಸಾಮಗ್ರಿಗಳ ಖರೀದಿ, 2 ಲ ರೂಗಳ ವೆಚ್ಚದಲ್ಲಿ ಶಿಥಿಲಗೊಂಡಿರುವ ಕೋಣೆಯನ್ನು ನವೀಕರಿಸಿ ಎಲ್ಕೆಜಿ, ಯುಕೆಜಿ ಮಕ್ಕಳಿಗೆ ಸ್ಥಳಾವಕಾಶ ಮಾಡಿಕೊಡಲಾಗುವುದು. ಜತೆಗೆ 50 ವಿದ್ಯಾರ್ಥಿಗಳಿಗೆ ಟೀ ಶರ್ಟ್ಗಳ ವಿತರಣೆ ಮಾಡಲಾಗಿದೆ.
ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ಗ್ರಂಥಾಲಯದ ಪುಸ್ತಕ ವಿತರಣೆ ಮಾಡಲು ಇನ್ನರ್ ವ್ಹೀಲ್ ಮಹಿಳಾ ಕ್ಲಬ್ ಮುಂದಾಗಿದೆ ಎಂದರು.
ಶಿಕ ರಮೇಶ ಕುಂಬಾರ ಮಾತನಾಡಿ, ಕಣ್ಣು ಅತಿ ಮುಖ್ಯವಾದ ಅಂಗವಾಗಿದೆ. ಆದ್ದರಿಂದ ಪಾಲಕರು ಮಕ್ಕಳ ಕಣ್ಣುಗಳ ಕುರಿತು ಕಾಳಜಿವಹಿಸಲು ತಿಳಿಸಿದರು. ಶಿಬಿರದಲ್ಲಿ 200 ವಿದ್ಯಾರ್ಥಿಗಳು, 200 ಗ್ರಾಮಸ್ಥರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಲಾಯಿತು.
ರಮೇಶ ದೇಸಾಯಿ, ಪ್ರಕಾಶ ದೇಸಾಯಿ, ರಮೇಶ ತಂಬಾಕೆ, ಸಿದ್ದಪ್ಪ ಈರಡ್ಡಿ, ಸುಧೀರಗೌಡ ಪಾಟೀಲ, ಮುಬಾರಕ ಮುಜಾವರ, ಸಿದರಾಯ ಕೆಳಗಿನಮನಿ, ಸುಬುದಾ ನಾವದಗಿ, ಸುನೀತಾ ಪಾಟೀಲ, ಶಿಕರಾದ ಎಸ್.ಎಂ. ನಾಟೀಕಾರ, ಎಸ್.ಎಂ. ಕಲಾದಗಿ, ವನಿತಾ ಬೈರವಾಡಗಿ, ಗುರು ಸಾಸಟ್ಟಿ, ಗುರುರಾಜ ಸಿಂದೂರ, ಎಂ.ಎಂ. ಬೀಳಗಿ, ಟಿ.ಡಿ. ಬೆಕಿನಾಳಕರ, ವನಜಾ ಬಡಿಗೇರ, ಈರಣ್ಣ ಚಿಪಾಟಿ ಮತ್ತಿತರರಿದ್ದರು.