ಕಾಲಕಾಲಕ್ಕೆ ಕಣ್ಣಿನ ತಪಾಸಣೆ ಅಗತ್ಯ

ಗುಂಡ್ಲುಪೇಟೆ ಪಟ್ಟಣದಲ್ಲಿ ಆಯೋಜಿಸಿದ್ದ ಶಿಬಿರವನ್ನು ಶರವಣ ಉದ್ಘಾಟಿಸಿದರು. ವಿ.ಆರ್.ಸುಬ್ಬರಾವ್, ನಾಗೇಂದ್ರ, ಶಿವಪ್ರಸಾದ್, ಶಂಕರನಾರಾಯಣ ಜೋಯಿಸಿ, ಕೆ.ಎನ್.ಮಹದೇವಸ್ವಾಮಿ, ಭೈರೇಶ್ ಗಾಣಿಗ್, ಮಲ್ಲು, ವೀರಭದ್ರಪ್ಪ, ಶ್ರೀನಿವಾಸ್, ಸುರೇಶ್, ಸಿದ್ದಪ್ಪ, ರಾ.ಬಾಬು, ವಿಜಯಕಾಂತ್, ಕೆ.ರಮೇಶ್ ಇದ್ದರು.
ಗುಂಡ್ಲುಪೇಟೆ ಪಟ್ಟಣದಲ್ಲಿ ಆಯೋಜಿಸಿದ್ದ ಶಿಬಿರವನ್ನು ಶರವಣ ಉದ್ಘಾಟಿಸಿದರು. ವಿ.ಆರ್.ಸುಬ್ಬರಾವ್, ನಾಗೇಂದ್ರ, ಶಿವಪ್ರಸಾದ್, ಶಂಕರನಾರಾಯಣ ಜೋಯಿಸಿ, ಕೆ.ಎನ್.ಮಹದೇವಸ್ವಾಮಿ, ಭೈರೇಶ್ ಗಾಣಿಗ್, ಮಲ್ಲು, ವೀರಭದ್ರಪ್ಪ, ಶ್ರೀನಿವಾಸ್, ಸುರೇಶ್, ಸಿದ್ದಪ್ಪ, ರಾ.ಬಾಬು, ವಿಜಯಕಾಂತ್, ಕೆ.ರಮೇಶ್ ಇದ್ದರು.
Published on

ಗುಂಡ್ಲುಪೇಟೆ: ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಶರವಣ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ನೌಕರರ ಭವನದ ಆವರಣದಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ಶನಿವಾರ ಆಯೋಜಿಸಿದ್ದ ಕಣ್ಣಿನ ತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು. ಹಿಂದಿನ ದಿನಗಳಲ್ಲಿ ಊಟ ತಿಂಡಿ ಮಾಡಲು ನಿರಾಕರಿಸುವ ಮಕ್ಕಳಿಗೆ ಆಕಾಶದಲ್ಲಿ ಚಂದ್ರನನ್ನು ತೋರಿಸುತ್ತಿದ್ದರು. ಆದರೆ ಇತ್ತೀಚೆಗೆ ಪಾಲಕರು ತಮ್ಮ ಮಕ್ಕಳ ಕೈಗೆ ಮೊಬೈಲ್ ಕೊಡುತ್ತಿರುವುದರಿಂದ ಮಕ್ಕಳಿಗೆ ಬಾಲ್ಯದಲ್ಲಿಯೇ ಕಣ್ಣಿನ ಸಮಸ್ಯೆಗಳು ಉಂಟಾಗುತ್ತಿವೆ. ಅದ್ದರಿಂದ ಮಕ್ಕಳು ಎಷ್ಟೇ ಹಠಮಾಡಿದರೂ ಮೊಬೈಲ್ ಕೊಡದೆ ಅವರ ಕಣ್ಣಿನ ಆರೋಗ್ಯದ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕಣ್ಣಿನ ಚಿಕಿತ್ಸೆ ದುಬಾರಿಯಾಗುತ್ತಿದ್ದು, ಸ್ವಯಂಸೇವಾ ಸಂಸ್ಥೆಗಳು ಶಿಬಿರಗಳನ್ನು ಆಯೋಜಿಸುವ ಮೂಲಕ ಉತ್ತಮ ಕಾರ್ಯ ಮಾಡುತ್ತಿವೆ. ಇದು ಇನ್ನೂ ಹೆಚ್ಚಿನ ಜನರಿಗೆ ತಲುಪಿಸುವಂತಾಗಬೇಕು. ಸಾರ್ವಜನಿಕರು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಅರವಿಂದ ಕಣ್ಣಾಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ವಿಜಯಕಾಂತ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಣ್ಣಿನ ಮೇಲೆ ಅತಿಯಾದ ಒತ್ತಡ ಬೀಳುತ್ತಿರುವುದರಿಂದ ಸಮಸ್ಯೆ ಹೆಚ್ಚಾಗುತ್ತಿದ್ದು, ಕಾಲಕಾಲಕ್ಕೆ ತಮ್ಮ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಸಕ್ಕರೆ ಕಾಯಿಲೆ ಮನುಷ್ಯದ ಕಣ್ಣಿನ ದೃಷ್ಟಿ ಮೇಲೆ ಪರಿಣಾಮ ಬೀರುತ್ತಿದ್ದು, ಡಯಾಬಿಟಿಕ್ ರೆಟಿನೋಪತಿಯಿಂದ ಕಣ್ಣಿನ ನರಗಳು ದುರ್ಬಲವಾಗುತ್ತವೆ. 40 ವರ್ಷ ಮೇಲ್ಪಟ್ಟ ಎಲ್ಲರೂ ಕನಿಷ್ಟ ವರ್ಷಕ್ಕೊಮ್ಮೆಯಾದರೂ ಕಣ್ಣಿನ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದು ತಿಳಿಸಿದರು.

ಶಿಬಿರಗಳಲ್ಲಿ ತಪಾಸಣೆ ನಡೆಸಿ ಉಚಿತವಾಗಿ ಕ್ಯಾಟರಾಕ್ಟ್ ಶಸ್ತ್ರ ಶಸ್ತ್ರಚಿಕಿತ್ಸೆ ಮಾಡಿ ಐಒಎಲ್ ಲೆನ್ಸ್ ಅಳವಡಿಸಿ ದೃಷ್ಟಿ ಉಳಿಸುವಂತೆ ಮಾಡಲಾಗುತ್ತಿದೆ. ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಮುದಾಯದ ಸಹಕಾರದಿಂದ ಆಸ್ಪತ್ರೆ ವತಿಯಿಂದ ಪ್ರತಿ ತಿಂಗಳು ಅಲ್ಲಲ್ಲಿ ಕ್ಯಾಂಪ್‌ಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಸ್.ನಾಗೇಂದ್ರ, ಶಿಬಿರದ ಪ್ರಾಯೋಜಕರಾದ ಸಂತೋಷ್, ಸುನಿಲ್, ಮಲ್ಲೇಶ್, ಪಿಕಾರ್ಡ್ ಬ್ಯಾಂಕ್‌ನ ಎನ್.ನಾಗೇಂದ್ರ, ಎಂ.ಸಿ.ಶಿವಪ್ರಸಾದ್, ಶಂಕರನಾರಾಯಣ ಜೋಯಿಸ್, ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಜಿಲ್ಲಾ ಸಂಚಾಲಕ ರಾ.ಬಾಬು, ತಾಲೂಕು ಅಧ್ಯಕ್ಷ ಕೆ.ಎನ್.ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಭೈರೇಶ್ ಗಾಣಿಗ್, ಖಜಾಂಚಿ ಮಲ್ಲು, ನಿರ್ದೇಶಕರಾದ ವೀರಭದ್ರಪ್ಪ, ಸುರೇಶ್, ಸಿದ್ದಪ್ಪ, ಅನುಗ್ರಹ ಫೌಂಡೇಷನ್‌ನ ಕೆ.ರಮೇಶ್, ಪುಟ್ಟಮ್ಮ ಇದ್ದರು.

ಶಿಬಿರದಲ್ಲಿ ಡಾ.ಪ್ರವೀಣಾ ಎ.ಕುಮಾರ್, ಡಾ.ದೀಪ್ಸಿಕಾ, ಡಾ.ವಿಮಿ ವರ್ಗೀಸ್ ಅವರ ತಂಡ 90 ಕ್ಕೂ ಹೆಚ್ಚಿನ ಹೊರರೋಗಿಗಳನ್ನು ತಪಾಸಣೆಗೊಳಪಡಿಸಿತು. ಶಸ್ತ್ರಚಿಕಿತ್ಸೆ ಅಗತ್ಯವಿದ್ದ 26 ಜನರನ್ನು ಕೊಯಮತ್ತೂರಿಗೆ ಕರೆದೊಯ್ಯಲಾಯಿತು. ಕಳೆದ ತಿಂಗಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 25 ರೋಗಿಗಳನ್ನು ತಪಾಸಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net