ಹುಬ್ಬಳ್ಳಿ: ಇಲ್ಲಿಯ ಕೋಯಿನ್ ರಸ್ತೆಯಲ್ಲಿರುವ ಹುಬ್ಬಳ್ಳಿ ಕೋ ಆಪರೇಟಿವ್ ಹಾಸ್ಪಿಟಲ್ ಶತಮಾನೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಕೆಎಲ್ಇ ಜೆಜಿಎಂಎಂ ಮೆಡಿಕಲ್ ಕಾಲೇಜ್ ಸಹಯೋಗದೊಂದಿಗೆ ಆ. 5ರಂದು ಬೆಳಗ್ಗೆ 10ಕ್ಕೆ ಉಚಿತ ಕಣ್ಣಿನ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.
ತಪಾಸಣೆಯ ನಂತರ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತ ಔಷಧ ಹಾಗೂ ಕನ್ನಡಕ ನೀಡಲಾಗುವುದು ಎಂದು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಲಿಂಗರಾಜ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.