

ಹುಬ್ಬಳ್ಳಿ: ವಿಶ್ವ ಮಧುಮೇಹ ದಿನದ ನಿಮಿತ್ತ ಭಾರತೀಯ ವೈದ್ಯಕೀಯ ಸಂಘ ಹುಬ್ಬಳ್ಳಿ ಶಾಖೆ ಹಾಗೂ ಜಯಪ್ರಿಯಾ ಕಣ್ಣಿನ ಆಸ್ಪತ್ರೆ ವತಿಯಿಂದ ಇಲ್ಲಿಯ ಬೈಲಪ್ಪನವರ ನಗರದ ಐಎಂಎ ಕಚೇರಿಯಲ್ಲಿ ನ. 18ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 2ರವರೆಗೆ ಉಚಿತ ಮಧುಮೇಹ ಹಾಗೂ ನೇತ್ರ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.
ಬ್ಯಾಂಕ್ ಆಫ್ ಇಂಡಿಯಾದ ಶಾಖಾ ವ್ಯವಸ್ಥಾಪಕ ರಂಗಾರಾವ್ ರೆಡ್ಡಿ, ಡಾ. ಪ್ರಭು ಬಿರಾದಾರ ಅತಿಥಿಗಳಾಗಿ ಆಗಮಿಸುವರು.
ಕಣ್ಣಿನ ಪೊರೆ, ಗ್ಲುಕೊಮಾ, ಡಯಾಬಿಟಿಕ್ ರೆಟಿನೋಪಥಿ, ಮೆಳ್ಳಗಣ್ಣು, ಕರಿಗುಡ್ಡೆ ಮೇಲೆ ಬೆಳೆಯುವ ದುರ್ಮಾಂಸ ಹೀಗೆ ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳನ್ನು ಅತ್ಯಾಧುನಿಕ ಯಂತ್ರೋಪಕರಣಗಳಿಂದ ತಪಾಸಣೆ ಮಾಡಲಾಗುವುದು. ರಕ್ತದೊತ್ತಡ, ಮಧುಮೇಹ ಉಚಿತ ತಪಾಸಣೆ ನಡೆಸಲಾಗುವುದು ಎಂದು ಆಸ್ಪತ್ರೆ ಮುಖ್ಯ ವೈದ್ಯ ಡಾ. ವೆಂಕಟರಾಮ ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.