

ನವಲಗುಂದ: ಕಣ್ಣು ಮಾನವನ ದೇಹದ ಅತಿ ಸೂಕ್ಷ್ಮವಾದ ಅಂಗವಾಗಿದ್ದು, ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಡಿವೆಪ್ಪ ಮನಮಿ ಹೇಳದರು.
ತಾಲೂಕಿನ ಮೊರಬ ಗ್ರಾಮದಲ್ಲಿ ಗುರುವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ, ಹುಬ್ಬಳ್ಳಿಯ ಡಾ. ಎಂ.ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಎಂ.ಎಂ. ಜೋಶಿ ಆಸ್ಪತ್ರೆಯ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ ಶಿಬಿರದ ಉದ್ದೇಶ ತಿಳಿಸಿದರು.
ಆನಂದಯ್ಯ ಹಿರೇಮಠ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮೊರಬ ಗ್ರಾಮದಲ್ಲಿ ಅಂಧತ್ವ ಮತ್ತು ದೃಷ್ಟಿ ಹೀನತೆಯ ನಿಯಂತ್ರಣಕ್ಕಾಗಿ ಎಂ.ಎಂ. ಜೋಶಿ ಆಸ್ಪತ್ರೆ ವತಿಯಿಂದ ‘ದೃಷ್ಟಿ ಕೇಂದ್ರ’ ತೆರೆಯುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ತಪಾಸಣೆಗೊಳಗಾದ ಸುಮಾರು 200 ಶಿಬಿರಾರ್ಥಿಗಳಲ್ಲಿ 50 ಜನರನ್ನು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ಕ್ಷಮತಾ ಸಂಚಾಲಕ ಗೋವಿಂದ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊರಬ ಗ್ರಾಪಂ ಅಧ್ಯಕ್ಷೆ ಪಾರ್ವತೆವ್ವ ಜಾಲಿಹಾಳ, ಉಪಾಧ್ಯಕ್ಷ ಶಿವಯೋಗಿ ಮನಮಿ, ಗ್ರಾಮದ ಪ್ರಮುಖರಾದ ಶರಣಪ್ಪಗೌಡ ದಾನಪ್ಪಗೌಡ, ಈರಣ್ಣ ಕೆರೆಮನಿ, ಬಸವರಾಜ ದವಟೆ, ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿ ಮುರಲೀಧರ ಮಳಗಿ, ಚಂದ್ರಶೇಖರ ಬೆಳವಾಡಿ, ನಿಂಗಪ್ಪ ಜಾಲಿಹಾಳ, ವಿಜಯಕುಮಾರ ಪಾಟೀಲ ಹಾಗೂ ಮೊರಬ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.