

ಬಂಟ್ವಾಳ: ತಾಲೂಕಿನ ಕೊಡ್ಮಾಣ್ ಪುದು ಗ್ರಾಮದ ಕಾಪಿಕಾಡ್ ಎಂಬಲ್ಲಿ ನವಜ್ಯೋತಿ ಸೇವಾ ಸಂಘ ಹಾಗೂ ವಿಷನ್ ಸ್ಪ್ರಿಂಗ್ ಫೌಂಡೇಶನ್ ನೋಯ್ಡಾ ಸಹಯೋಗದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಹಾಗೂ ಕನ್ನಡಕ ವಿತರಣೆ ಭಾನುವಾರ ನಡೆಯಿತು.
ಫರಂಗಿಪೇಟೆ ಶ್ರೀ ರಾಮ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕೆ.ಆರ್.ದೇವದಾಸ್ ಉದ್ಘಾಟಿಸಿದರು. ಮೇರಮಜಲು ಗ್ರಾಪಂ ಅಧ್ಯಕ್ಷ ಸತೀಶ್ ನಾಯ್ಗ, ವಿಷನ್ ಸ್ಪ್ರಿಂಗ್ ಫೌಂಡೇಶನ್ ನೋಯ್ಡಾ ಔಟ್ ರೀಚ್ ಇನ್ಚಾರ್ಜ್ ಜೈಪಾಲ್ ಆಚಾರ್ಯ, ಪುದು ಗ್ರಾಪಂ ಸದಸ್ಯ ಸುಬ್ರಹ್ಮಣ್ಯ ರಾವ್, ಆಶಾ ಕಾರ್ಯಕರ್ತೆ ಮಾಧವಿ ಸಂದೀಪ್ ಶೆಟ್ಟಿ ಕೊಡ್ಮಾಣ್, ನವಜ್ಯೋತಿ ಸೇವಾ ಸಂಘ ಅಧ್ಯಕ್ಷ ಗಿರೀಶ್ ಶೆಟ್ಟಿ ಕಾಪಿಕಾಡ್ ಮೊದಲಾದವರಿದ್ದರು.
ವಿದ್ಯಾರಾಜ್ ಕುಲಾಲ್ ಸ್ವಾಗತಿಸಿದರು. ಶಿವರಾಜ್ ಕುಲಾಲ್ ನಿರೂಪಿಸಿದರು. ಯತೀಶ್ ಪೂಜಾರಿ ವಂದಿಸಿದರು.