ಮೈಸೂರು: ಡಾ. ರಾಜ್‌ಕುಮಾರ್ ಕಲಾ ಸೇವಾ ಟ್ರಸ್ಟ್‌ನಿಂದ ಮಾ. 23 ರಂದು ಜಗನ್ಮೋಹನ ಅರಮನೆ ಆವರಣದಲ್ಲಿ ನೇತ್ರ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಮೈಸೂರು ಜಯರಾಂ ತಿಳಿಸಿದರು.
ಅಂದು ಬೆಳಗ್ಗೆ 7.30 ರಿಂದ ಮಧ್ಯಾಹ್ನ 1.30ರವರೆಗೆ ಆಯೋಜಿಸಿರುವ ಶಿಬಿರದಲ್ಲಿ ಕಣ್ಣಿನ ಪೊರೆ, ಗ್ಲಾಕೋಮಾ, ನೀರು ಸೋರುವಿಕೆ, ವಾರೆಗಣ್ಣು, ಕಣ್ಣಿನಲ್ಲಿ ಗೀಚು ಬರುವುದು, ಹತ್ತಿರ ಮತ್ತು ದೂರದೃಷ್ಟಿ ದೋಷ, ಕಣ್ಣಿನಲ್ಲಿ ಬಿರುಕು, ರಾತ್ರಿ ಕುರುಡುತನ ಮೊದಲಾದವನ್ನು ತಪಾಸಣೆ ನಡೆಸಿ, ವೈದ್ಯರು ಸಲಹೆ ನೀಡಲಿದ್ದಾರೆ. ಹೀಗಾಗಿ, ನಗರದ ಸಾರ್ವಜನಿಕರು ಪ್ರಯೋಜನ ಪಡೆಯಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು. ಗಾಯಕ ಸುರೇಶ್, ಆಯೋಜಕರಾದ ವೆಂಕಟೇಶ್ ಇದ್ದರು.