ಹುಣಸೂರಿನಲ್ಲಿ ಕಣ್ಣಿನ ತಪಾಸಣೆ ಶಿಬಿರ

ಹುಣಸೂರು ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ 64 ಜನರನ್ನು ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಡಾ.ಎಸ್.ಶ್ರೀಕಾಂತ್, ಮಂಜುನಾಥ್ ಇತರರಿದ್ದಾರೆ.

Published on

ಹುಣಸೂರು: ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ, ಸದೃಢ ಚಾರಿಟಬಲ್ ಟ್ರಸ್ಟ್ ಮತ್ತು ಡೀಡ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆಯ 60ನೇ ಶಿಬಿರದಲ್ಲಿ 124 ಜನ ತಪಾಸಣೆಗೊಳಗಾದರು.

ಮಂಗಳವಾರ ಡೀಡ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ತಪಾಸಣೆಗೊಳಗಾದವರ ಪೈಕಿ 64 ಜನರಿಗೆ ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಯಿತು. ಕಳೆದ ತಿಂಗಳ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆ ಪಡೆದಿದ್ದ 60 ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಶಿಬಿರದಲ್ಲಿ ಡಾ.ಅಪೇಕ್ಷಾ, ಡಾ.ಸೌಜನ್ಯಾ ಕಣ್ಣಿನ ತಪಾಸಣೆ ನಡೆಸಿದರು.

ಇದೇ ಸಂದರ್ಭದಲ್ಲಿ ಕಣ್ಣಿನ ತಪಾಸಣೆಗೊಳಗಾದವರ ಬಿಪಿ, ಶುಗರ್ ಪರಿಶೀಲಿಸಲಾಯಿತು. ಶಂಕರ ಆಸ್ಪತ್ರೆಯ ಶಿಬಿರದ ಸಂಯೋಜಕ ಶ್ರೀಕಂಠ ಮೂರ್ತಿ ಕಣ್ಣಿನ ಶಸ್ತ್ರ ಚಿಕಿತ್ಸೆ ಹಾಗೂ ಆಸ್ಪತ್ರೆಯಲ್ಲಿನ ಸೌಲಭ್ಯಗಳ ಕುರಿತು ವಿವರಿಸಿದರು. ಸದೃಢ ಟ್ರಸ್ಟ್‌ನ ಮಂಜುನಾಥ, ಉಷಾ ಮತ್ತು ಕಾರ್ಯಕರ್ತರು, ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net