ರಾಮೇಶ್ವರ ಸಂಘದಿಂದ ಕಣ್ಣಿನ ತಪಾಸಣೆ ಶಿಬಿರ

21Kush03
ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಹಾಸನ ಅಮ್ಮ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಕಣ್ಣಿನ ಪೊರೆ ತಪಾಸಣೆ ಶಿಬಿರದಲ್ಲಿ ಅಧ್ಯಕ್ಷ ಕೆ.ಕೆ.ಹೇಮಂತ್‌ಕುಮಾರ್ ಮಾತನಾಡಿದರು. ವಿ.ಬಸಪ್ಪ, ಕೆ.ಪಿ.ರಾಜು, ಕೆ.ಜೆ.ಕುಮಾರ್ ಇತರರು ಇದ್ದರು.
Published on

ಕುಶಾಲನಗರ: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಹಾಸನ ಅಮ್ಮ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಸಹಕಾರ ಸಂಘದ ಸಭಾಂಗಣದಲ್ಲಿ ಯಶಸ್ವಿನಿ ಯೋಜನೆಯ ಫಲಾನುಭವಿಗಳು ಮತ್ತು ಸಾರ್ವಜನಿಕರಿಗೆ ಶನಿವಾರ ಕಣ್ಣಿನ ಪೊರೆ ಉಚಿತ ತಪಾಸಣೆ ಶಿಬಿರ ನಡೆಯಿತು.

ಸಹಕಾರ ಸಂಘದ ಅಧ್ಯಕ್ಷ ಕೆ.ಕೆ ಹೇಮಂತ್ ಕುಮಾರ್ ಮಾತನಾಡಿ, ಸಂಘದ ವ್ಯಾಪ್ತಿಯ ಸಾವಿರಾರು ರೈತ ಸದಸ್ಯರು ಯಶಸ್ವಿನಿ ಯೋಜನೆಯಲ್ಲಿ ಪಾಲುದಾರರಾಗಿದ್ದಾರೆ. ರೈತ ಸದಸ್ಯರಿಗೆ ಆರೋಗ್ಯ ಸಮಸ್ಯೆಗಳು ಬಂದ ಸಂದರ್ಭಗಳಲ್ಲಿ ಇದರ ಪ್ರಯೋಜನವಾಗುತ್ತದೆ. ಅದರಂತೆಯೇ ಯಶಸ್ವಿನಿ ಯೋಜನೆಯ ಸದಸ್ಯರ ಕಣ್ಣಿನ ತಪಾಸಣೆಯು ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವುದರಿಂದ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಹಾಸನದ ಅಮ್ಮ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಹದೇವ, ಕಣ್ಣಿನ ಬಗ್ಗೆ ಮತ್ತು ಯೋಜನೆಯ ಸದುಪಯೋಗದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ವಿ.ಬಸಪ್ಪ, ನಿರ್ದೇಶಕರಾದ ಕೆ.ಪಿ.ರಾಜು, ಕೆ.ಜೆ.ಕುಮಾರ್, ಕೆ.ಬಿ.ರಾಮಚಂದ್ರ, ಆರ್.ಕೆ.ನಾಗ್ರೇಂದ್ರ ಬಾಬು, ಕೃಷ್ಣಗೌಡ, ಎಸ್.ಆರ್.ಅರುಣ್ ರಾವ್, ಎಸ್.ಎಸ್.ಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮೀನಾ, ಅಮ್ಮ ಆಸ್ಪತ್ರೆಯ ವೈದ್ಯೆ ಡಾ.ಪ್ರೀತೂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net