

ಬಂಟ್ವಾಳ: ವರ್ತಮಾನದಲ್ಲಿ ನಾನು, ನನ್ನ ಪರಿವಾರ ಮತ್ತು ನನ್ನ ವ್ಯವಹಾರ ಎನ್ನುವ ಮನಸ್ಥಿತಿ ಹೆಚ್ಚಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿಯೂ ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಾ, ವಿವಿಧ ಸೇವಾಯೋಜನೆಗಳನ್ನು ನೈಜ ಫಲಾನುಭವಿಗಳಿಗೆ ತಲುಪಿಸುವ ಯುವಜನರ ಕಾಳಜಿ ಶ್ಲಾಘನೀಯ ಎಂದು ಶ್ರೀನಿವಾಸ್ ಫೌಂಡೇಶನ್ ಮುಂಬೈ ಸಂಸ್ಥಾಪಕ ಶ್ರೀನಿವಾಸ್ ಪಿ. ಸಪಲ್ಯ ನುಡಿದರು.
ಪಾಣೆಮಂಗಳೂರಿನಲ್ಲಿ ಭಾನುವಾರ ವಿಶ್ವ ಗಾಣಿಗರ ಚಾವಡಿ ಮಂಗಳೂರು, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಆಶ್ರಯದಲ್ಲಿ ವೈದ್ಯಕೀಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಚಿರಾವಿ ಆಪ್ಟಿಕಲ್ಸ್ ಪಾಣೆಮಂಗಳೂರು ಆಶ್ರಯದಲ್ಲಿ ನೇತ್ರ ತಪಾಸಣೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಶಿಬಿರ, ಶ್ರೀನಿವಾಸ್ ಫೌಂಡೇಶನ್ ಮುಂಬೈ ಮತ್ತು ಯುಎಇ ಗಾಣಿಗ ಫ್ಯಾಮಿಲಿ ದುಬೈ ಆಶ್ರಯದಲ್ಲಿ ಗೇನದ ತುಡರ್ ವಿದ್ಯಾನಿಧಿ ಹಸ್ತಾಂತರಿಸಲಾಯಿತು.
ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ವೇದವ ಗಾಣಿಗ, ರತಿಕಾ ಶ್ರೀನಿವಾಸ್ ಸಫಲ್ಯ, ಪಾಣೆಮಂಗಳೂರಿನ ಸುಮಂಗಲಾ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಸಿಇಒ ವಸಂತ ಪಿ., ಉದ್ಯಮಿ ಮಾಧವ ಮಾವೆ, ನರಿಕೊಂಬು ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್, ಸಫಲ ತ್ರೈಮಾಸಿಕ ಪತ್ರಿಕೆ ಸಂಪಾದಕ ಭಾಸ್ಕರ ಎಸ್. ಉದ್ಯಮಿ ಭುವನೇಶ್ ರಘು ಸಫಲ್ಯ, ಮುಂಬೈ ಸಾಪಲ್ಯ ಸೇವಾ ಸಂಘ ಸದಸ್ಯರಾದ ಹೇಮಂತ್ ಸಫಲಿಗ ಮುಂಬೈ, ಕಿರಣ್ಕುಮಾರ್, ಭಾರತೀಯ ಕ್ಯಾನ್ಸರ್ ಸೊಸೈಟಿಯ ಪ್ರಾದೇಶಿಕ ಸಂಯೋಜಕ ರಂಜನ್ ಎ.ವಿ, ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ನವೀನ್ ನಾಯ್ಕ, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಆಂಕಾಲಜಿ ವಿಭಾಗದ ವೈದ್ಯ ಡಾ.ಕುಮಾರ್ ಎಸ್ ವಶಿಷ್ಟ, ವಿದ್ಯಾ ಮೋಹನ್, ರೈನಾ ಮಸ್ಕರೇನಸ್, ಬಾಲಕೃಷ್ಣ ಸೆರ್ಕಳ, ಸಚಿನ್ ಮೆಲ್ಕಾರ್, ಯೋಗೀಶ್ ಸಫಲ್ಯ ಜಕ್ರಿಬೆಟ್ಟು, ಯಶೋಧರ ಕರ್ಬೆಟ್ಟು, ಜಗದೀಶ್ ಕುಂದರ್, ಉಮೇಶ್ ಪಾಣೆಮಂಗಳೂರು, ವಿದ್ಯಾಪುಷ್ಪರಾಜ್, ಪುರುಷೋತ್ತಮ ಟೈಲರ್ ನರಿಕೊಂಬು, ಕೃಷ್ಣಪ್ಪ ಅಂತರ, ಯೋಗೀಶ್ ಬೋಳಂತೂರು, ಪತ್ರಕರ್ತರಾದ ಜಯಾನಂದ ಪೆರಾಜೆ, ಮೋಹನ್ ಶ್ರೀಯಾನ್ ರಾಯಿ, ನಿವೃತ್ತ ಎಎಸ್ಐ ಮೋಹನ್ ಉಳ್ಳಾಲ, ಸುಂದರ ಮೆಂಡನ್, ಅನಂತ ವಿಜಯ್, ಹರಿಪ್ರಸಾದ್ ಶಕ್ತಿನಗರ, ದೇವಿಪ್ರಸಾದ್ ಎಂ, ಅಭಿಷೇಕ್ ಧರ್ಮಸ್ಥಳ, ವಿನಯ ಅನಂತವಿಜಯ್, ಸುಶ್ಮಿತಾ ಉಪ್ಪಿನಂಗಡಿ, ಗಾಯತ್ರಿ ಬಂಗೇರ, ವನಿತಾ ಕರಿಂಗಾನ, ಶರ್ಮಿಳಾ ಅಳಪೆ, ಹೇಮಾ ಅಶೋಕ್ ಸೋಮೇಶ್ವರ, ಸುಮಿತ್ರಾ ಕಳ್ಳಿಗೆ, ಯುವರಾಜ್ ಬೋಳಂಗಡಿ, ಸಂದೀಪ್ ಮೆಂಡನ್, ದೇವರಾಜ್ ಎಡಪದವು, ಹರಿಶ್ಚಂದ್ರ ಶಕ್ತಿನಗರ, ಸುಶಾನ್ ಪಾಣೇರ್, ಚೇತನ್ ವಗ್ಗ, ದೀಪಕ್ ಅಡ್ಯಾರ್, ಸಂದೀಪ್ ಪಲ್ಲಮಜಲು, ಸಚಿನ್ ಪಂಡಿತ್ಹೌಸ್ ಮೊದಲಾದವರು ಉಪಸ್ಥಿತರಿದ್ದರು. ಶ್ರೀಕಾಂತ್ ಗಾಣಿಗ ನರಿಕೊಂಬು ಸ್ವಾಗತಿಸಿದರು. ವಿಜಯ ವೈ ಬೋಳಂತೂರು ನಿರೂಪಿಸಿದರು. ಶಮಿತ್ ಮತ್ತು ಸಮೀಕ್ಷಾ ಪ್ರಾರ್ಥಿಸಿದರು. ದೀಕ್ಷಿತಾ ಕುರ್ನಾಡು, ಅನಿತಾ ಜಿ. ಕೊಲ್ಲೂರು ವರದಿ ವಾಚಿಸಿದರು. ಗಣೇಶ್ ಜಿ ಕೊಲ್ಲೂರು ವಂದಿಸಿದರು.
ಪೆನ್ಸಿಲ್ ಆರ್ಟ್ಗೆ ಭಾರಿ ಮೆಚ್ಚುಗೆ
ತನ್ನ ಶೈಕ್ಷಣಿಕ ಬದುಕಿಗೆ ನೆರವಾದ ಶ್ರೀನಿವಾಸ್ ಪಿ ಸಫಲ್ಯರಿಗೆ ಧನ್ಯವಾದ ಸಮರ್ಪಿಸಲು ತನ್ನಲ್ಲಿರುವ ಚಿತ್ರಕಲಾ ಕೌಶಲ ಪ್ರದರ್ಶಿಸಿ ಪೆನ್ಸಿಲ್ ಆರ್ಟ್ನಲ್ಲಿ ಚಿತ್ರವನ್ನು ಬರೆದು ಸಮರ್ಪಿಸಿದ ಬೆಳ್ತಂಗಡಿ ತಾಲೂಕಿನ ನಾಳ ನಿವಾಸಿ ವಿದ್ಯಾರ್ಥಿನಿ ಪಂಚಮಿ ಪ್ರತಿಭೆಗೆ ಮೆಚ್ಚುಗೆ ವ್ಯಕ್ತವಾಯಿತು. ಗಾಣದ ಬದುಕು ಬಗೆಗಿನ ಕಲಾಕೃತಿಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.