

ವಿಜಯವಾಣಿ ಸುದ್ದಿಜಾಲ ಗದಗ
ಪಂಚೇಂದ್ರಿಯಗಳಲ್ಲಿ ಪ್ರಮುಖ ಅಂಗವಾದ ಕಣ್ಣನ್ನು ಸಂರಸಿಕೊಳ್ಳುವದು ಅತೀ ಅವಶ್ಯವಾಗಿದೆ ಎಂದು ಹಿರಿಯ ಹೋಮಿಯೋಪಥಿ ವೈದ್ಯ ಸುಭಾಸ ಶಿವನಗೌಡರ ಹೇಳಿದರು.
ನಗರದ ಸರ್ಕಾರಿ ಶಾಲೆ(ನಂ.2)ರಲ್ಲಿ ಸೋಮವಾರ ನಗರದ ಸುದರ್ಶನ ಚಕ್ರ ಯುವ ಮಂಡಳ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವಿಂದು ನೋಡಬೇಕಾದನ್ನು ಬಿಟ್ಟು ನೋಡಬಾರದನ್ನು ನೋಡುತ್ತ ಕಾಲ ಹರಣ ಮಾಡಿ, ಕಣ್ಣಿನ ತೀಕ್ಷ$್ಣತೆಯನ್ನು ಕಡಿಮೆ ಮಾಡಿಕೊಂಡಿದ್ದೇವೆ. ಯುವಕರಲ್ಲಿ ಮಂದ, ಅಂಧರಾಗುತ್ತಿರುವ ವಿಷಯ ವಿಷಾಧನೀಯ. ಪುಸ್ತಕ ಹಿಡಿದು ಪರಿಶ್ರಮಪಟ್ಟು ಅಧ್ಯಯನ ಮಾಡಬೇಕಾದ ವಿದ್ಯಾಥಿರ್ಗಳಲ್ಲಿ ಕೆಲವರಂತೂ ಟಿ.ವಿ, ಮೊಬೈಲ್ದಲ್ಲಿ ತಲ್ಲೀನರಾಗಿ ಕಣ್ಣು ಕಳೆದುಕೊಳ್ಳುತ್ತಿರುವುದು ದುರಾದೃಷ್ಠಕರ ಎಂದರು.
ನಗರದ ಸುದರ್ಶನ ಚಕ್ರ ಯುವ ಮಂಡಳ ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿದೆ. ಮಂಡಳದ ಅಧ್ಯ ರಾವೇಂದ್ರ ಹಬೀಬ ಅವರು ತಮ್ಮ ಸಮಾನಮನಸ್ಕ ಸ್ನೇಹಿತರ ಸಹಕಾರದೊಂದಿಗೆ ಒಳ್ಳೆಯ ಜನಪರ ಕಾರ್ಯ ಮಾಡುತ್ತಿದ್ದಾರೆ. ಸಂಟನೆ ಹೀಗೆ ಒಳ್ಳೆಯ ಕೆಲಸ ಮಾಡುತ್ತಿದೆ ಎಂದರು.
ಕೆಎಸ್ಎಸ್ ಶಿಕ್ಷಣ ಸಂಸ್ಥೆ ಕಾರ್ಯದಶಿರ್, ಎಬಿವಿಪಿ ಪ್ರಮುಖ ಡಾ. ಪುನೀತ ಬೆನಕನವಾರಿ ಮಾತನಾಡಿ, ಉಚಿತ ಕಣ್ಣಿನ ತಪಾಸಣೆ ಶಸ್ತ್ರಚಿಕಿತ್ಸಾ ಶಿಬಿರದ ಪ್ರಯೋಜನವನ್ನು ಅರ್ಹ ಲಾನುಭವಿಗಳು ಪಡೆದುಕೊಳ್ಳಬೇಕು. ಯುವಕರು ಮನಸ್ಸು ಮಾಡಿದರೆ ಏನೆಲ್ಲಾ ಒಳ್ಳೆಯ ಕೆಲಸ ಮಾಡಬಲ್ಲರು ಎಂಬುದಕ್ಕೆ ಈ ಶಿಬಿರವೇ ಸಾ ಎಂದರು.
ರಾವೇಂದ್ರ ಹಬೀಬ ಮಾತನಾಡಿ, ಹಲವು ವರ್ಷಗಳಿಂದ ಯುವ ಮಂಡಳವು ಈ ರೀತಿಯ ಸಮಾಜಮುಖಿ ಕಾರ್ಯ ಮಾಡುತ್ತ ಬಂದಿದೆ. ಶಿಬಿರದಲ್ಲಿ ಒಟ್ಟು 105 ಜನರ ಕಣ್ಣುಗಳನ್ನು ತಪಾಸಣೆ ಮಾಡಲಾಗಿದೆ. ಇವರಲ್ಲಿ 55 ಜನರು ಉಚಿತ ಶಸ್ತ್ರಚಿಕಿತ್ಸೆಗೆ ಅರ್ಹತೆಯನ್ನು ಪಡೆದಿದ್ದು ಅವರನ್ನು ಗದುಗಿನಿಂದ ಹುಬ್ಬಳ್ಳಿಗೆ ವಿಶೇಷ ವಾಹನದಲ್ಲಿ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಬಳಿಕ ಗದುಗಿಗೆ ಕರೆದುಕೊಂಡು ಬರುವ ವ್ಯವಸ್ಥೆಯ ಜವಾಬ್ದಾರಿಯನ್ನು ಯುವ ಮಂಡಳ ವಹಿಸಿಕೊಂಡಿದೆ. ಶ್ರೀದಲ್ಲಿಯೇ ಗೃಹಿಣಿಯರಿಗೆ, ನಿರುದ್ಯೋಗಿ ಯುವತಿಯರಿಗಾಗಿ ಉಚಿತ ಹೊಲಿಗೆ ತರಬೇತಿ ಶಿಬಿರವನ್ನು ಏರ್ಪಡಿಸಿ ಅವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯ ಕ್ರಮ ಜರುಗಿಸಿ ಅವರು ಆಥಿರ್ಕವಾಗಿ ಸಬಲರಾಗುವಂತೆ ಮಾಡುವ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಹುಲಿಗೆಮ್ಮ ಹಬೀಬ, ಶಂಕರ ದಹಿಂಡೆ, ನಾಗರಾಜ ಕುರ್ತಕೋಟಿ, ಡಾ. ಪಲ್ಲವಿ ನರಗುಂದ, ವಿಜಯ ಸೋಳಂಕಿ, ಗಣೇಶ ಸುಲ್ತಾನಪೂರ, ವಿಜಯ ಬನಹಟ್ಟಿ, ನಾಗರಾಜ ಓದು, ವಸಂತ ಹಬೀಬ, ಶೇಖರ ಗುಜ್ಜರ, ನಾಗರಾಜ ಪವಾರ, ಹನಮಂತ ಪವಾರ, ಬಸವರಾಜ ಹೂಗಾರ, ವಿನಾಯಕ ಚವಡಿ, ಶಿವರಾಜ, ರೂಪಾ, ಸ್ವಪ್ನಾ, ವೆಂಕಟೇಶ ಸೇರಿದಂತೆ ಇತರರು ಇದ್ದರು.