ಗಮನ ಸೆಳೆದ ವಿಜ್ಞಾನ, ತಾಂತ್ರಿಕ ವಸ್ತು ಪ್ರದರ್ಶನ

SDP VASTU PRADARSHANA
Published on

ಸಿದ್ದಾಪುರ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್​ನಲ್ಲಿ ವಿಜ್ಞಾನ ಮತ್ತು ತಾಂತ್ರಿಕ ವಸ್ತು ಪ್ರದರ್ಶನ ನಡೆಯಿತು.

ಬಿಇಒ ಎಂ.ಎಚ್.ನಾಯ್ಕ ಅವರು ಕಾಲೇಜ್​ನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸಿದ್ಧಪಡಿಸಿದ ತಾಂತ್ರಿಕ ಮಾದರಿಗಳ ಹಾಗೂ ವೈಜ್ಞಾನಿಕ ಪರಿಕಲ್ಪನೆಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಉದ್ಘಾಟಿಸಿದರು.

ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಬೇಡ್ಕಣಿ ಜನತಾ ವಿದ್ಯಾಲಯದ ಗಣಿತ ಶಿಕ್ಷಕ ಜಿ.ಟಿ. ಹೆಗಡೆ, ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿಭಾಗಾಧಿಕಾರಿ ವಿನಯ್ ಭಟ್ಟ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net