

ಬೆಂಗಳೂರು: "ದೇಶಭಕ್ತಿ ಸಾರುವ ಗೀತೆಗಳು', "ಸಂವಿಧಾನದ ಮಹತ್ವ', "ಶಿಸ್ತುಬದ್ಧ ಪಥ ಸಂಚಲನ', "ಮೈ ರೋಮಾಂಚನಗೊಳಿಸುವ ಭಯೋತ್ಪಾದಕರಿಂದ ಹೈಜಾಕ್ ಆದ ಪ್ರಯಾಣಿಕರ ರಕ್ಷಣೆ ಅಣುಕು ದೃಶ್ಯ', ಗೋರ್ಖಾ ರೈಲ್ಸ್ನ ಖುಕ್ರಿ ನೃತ್ಯ', "ಶಾಲಾ ಮಕ್ಕಳ ನೃತ್ಯ '........
ಶಾಲಾ ಶಿಕ್ಷಣ ಇಲಾಖೆ,ಬಿಬಿಎಂಪಿ ಸಹಯೋಗದಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತ, ಭಾನುವಾರ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಂಡುಬಂದ ಚಿತ್ರಣಗಳಿವು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಧ್ವಜಾರೋಹಣ ನೆರವೇರಿಸಿದ ಬಳಿಕ ವಿವಿಧ ತಂಡಗಳಿಂದ ಪರೇಡ್ ಗೌರವ ವಂದನೆ ಸ್ವೀಕರಿಸಿ ರಾಜ್ಯಕ್ಕೆ ಗಣರಾಜ್ಯೋತ್ಸವದ ಸಂದೇಶ ಸಾರಿದರು. ನಂತರ ಸೇನೆ, ಕೆಎಸ್ಆರ್ಪಿ, ಪೊಲೀಸ್, ಸ್ಕೌಟ್ ಮತ್ತು ಗೈಡ್ಸ್, ಎನ್ಸಿಸಿ ಮತ್ತು ಸೇವಾದಳ ಸೇರಿ ಕೇರಳದ ಪೊಲೀಸ್ ತಂಡ ಸೇರಿ ವಿವಿಧ ತಂಡಗಳು ಪಥಸಂಚಲದ ಮೂಲಕ ರಾಜ್ಯಪಾಲರಿಗೆ ಗೌರವ ವಂದನೆ ಸಲ್ಲಿಸಿದವು. ವಿವಿಧ ಶಾಲೆಯ ತಂಡಗಳ ಮಕ್ಕಳು ಕವಾಯತಿನಲ್ಲಿ ಪಾಲ್ಗೊಂಡಿದ್ದವು. ಒಟ್ಟು 1,500ಕ್ಕೂ ಅಧಿಕ ಮಂದಿ ಪಥಸಂಚಲದಲ್ಲಿ ಭಾಗಿಯಾಗಿ ರಾಜ್ಯಪಾಲರಿಗೆ ಗೌರವರಕ್ಷೆ ನೀಡಿದರು. ವಿವಿಧ ತುಕಡಿಗಳಿಂದ ಆಕರ್ಷಕ ಪಥಸಂಚಲನ ಕಣ್ಮನ ಸೆಳೆಯಿತು.
ಮೈ ರೋಮಾಂಚನಗೊಳಿಸಿದ ಗರುಡಪಡೆ: ಭಯೋತ್ಪಾದಕರಿಂದ ಹೈಜಾಕ್ ಆದ ಬಸ್ ಪ್ರಯಾಣಿಕರ ರಕ್ಷಣೆ ಅಣುಕು ದೃಶ್ಯ ನೋಡುಗರ ಗಮನ ಸೆಳೆಯಿತು.ಬಸ್ ಸುತ್ತುವರಿದ ಗರುಡಪಡೆ, ಶತ್ರುಗಳನ್ನು ಹೊಡೆದುರುಳಿಸಿ ರಸುವ ದೃಶ್ಯ ಮೈ ರೋಮಾಂಚನಗೊಳಿಸಿತ್ತು. ಇದರಲ್ಲಿ ಸೇನೆಪಡೆಯ ಶ್ವಾನವು ಶತ್ರುನ ತೋಳನ್ನು ಗಬಕ್ಕನ್ನೇ ಬಾಯಿ ಹಾಕಿ ಕಚ್ಚುವ ಮೂಲಕ ಸೈನಿಕರಿಗೆ ನೆರವಾಗುವ ದೃಶ್ಯ ಆಕರ್ಷಣೆಯಾಗಿತ್ತು. ಇದಕ್ಕೂ ಮುನ್ನ "ಗೋರ್ಖಾ ರೈಲ್ಸ್ನ ಖುಕ್ರಿ ನೃತ್ಯ, ಪಂಜಾಬ್ ಪರಂಪರೆ ಬಿಂಬಿಸುವ ಭಾಂಗ್ರ ನೃತ್ಯ, ಮೈಸೂರು ಕೆಎಸ್ಆರ್ಪಿ ಮೌಟೆಂಡ್ ಪೊಲೀಸ್ ತಂಡದ ಟೆಂಟ್ ಪೆಗ್ಗಿಂಗ್' ಕಾರ್ಯಕ್ರಮಗಳು ಸಭಿಕರ ಗಮನ ಸೆಳೆದವು. ಈ ವೇಳೆ ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವ ಅಂಶಗಳನ್ನು ಸಾರಿದವು.
ದೇಶದ ಬಗ್ಗೆ ಮಹತ್ವ ಸಾರಿದ ಮಕ್ಕಳು:ಪಥಸಂಚಲನದ ನಂತರ ಶಾಲಾ ಮಕ್ಕಳಿಂದ ದೇಶಭಕ್ತಿ ಸಾರುವ ಸಾಂಸತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.ಮೊದಲಿಗೆ ಬೆಂಗಳೂರು ದಣ ವಲಯದ ಅಗರದ "ಕರ್ನಾಟಕ ಪಬ್ಲಿಕ್ ಶಾಲೆ ಸೇರಿ ವಿವಿಧ ಶಾಲೆಗಳ 800 ಮಕ್ಕಳು "ನಾವೆಲ್ಲರೂ ಒಂದೇ ನಾವು ಭಾರತೀಯರು' ಗೀತೆಗೆ ನೃತ್ಯ ರೂಪಕ ಪ್ರದರ್ಶಿಸಿದರು. ಬಣ್ಣ ಬಣ್ಣದ ಉಡುಪು ಧರಿಸಿ, ದೇಶಕ್ಕಾಗಿ ವೀರಣ ಮರಣ ಹೊಂದಿದ್ದ ವೀರಕಲಿಗಳು,ಪ್ರಜಾಪ್ರಭುತ್ವ ಮತ್ತು ದೇಶಭಕ್ತಿ ಮಹತ್ವದ ಬಗ್ಗೆ ನೃತ್ಯ ಮೂಲಕ ಸಭಿಕರಿಗೆ ತಿಳಿಸಿಕೊಟ್ಟರು. ಮಹತ್ಮಾ ಗಾಂಧಿಜೀ, ಸುಭಾಷ್ ಚಂದ್ರ ಬೋಸ್, ವೀರ ಸಾವರ್ಕರ್ ಸೇರಿ ವಿವಿಧ ಹೋರಾಟಗಾರರ ಭಾವಚಿತ್ರ ಹಿಡಿದು ನೃತ್ಯದ ಮೂಲಕದ ದೇಶದ ಕುರಿತು ಮಹತ್ವದ ಸಂದೇಶ ಸಾರಿದರು. ನಂತರ, ಹೇರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸೇರಿ ವಿವಿಧ ಕಾಲೇಜುಗಳ 650 ಮಕ್ಕಳಿಂದ "ಅರಿವೇ ಅಂಬೇಡ್ಕರ್' ಗೀತೆಗೆ ನೃತ್ಯ ಪ್ರದರ್ಶಿಸಿದರು. ತರಹೇವಾರಿ ಉಡುಪು ಧರಿಸಿದ ಮಕ್ಕಳು "ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಸಂವಿಧಾನದ ಮಹತ್ವ ಕುರಿತು ಸಭಿಕರಿಗೆ ಅರಿವು ಮೂಡಿಸಿದರು.
ಬಹುಮಾನ ವಿತರಣೆ: ಪಥಸಂಚನದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಮತ್ತು ತಂಡಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಬಹುಮಾನ ವಿತರಿಸಿದರು. 7 ಗುಂಪುಗಳಲ್ಲಿ ವಿವಿಧ ಬಹುಮಾನ ನೀಡಲಾಯಿತು. ಮೊದಲ ಗುಂಪಿನಲ್ಲಿ ಸೇನಾ ಪಡೆ, ಬಿಎಸ್ಎಫ್, ಏರ್ಪೋರ್ಸ್ ಮತ್ತು ಕೆಎಸ್ಆರ್ಪಿ ಕ್ರಮವಾಗಿ ಮೊದಲ ನಾಲ್ಕು ಬಹುಮಾನ ಪಡೆದವು. ಗ್ರೂಪ್ "ಬಿ'ನಲ್ಲಿ ಅಗ್ನಿಶಾಮಕ ದಳ, ಎನ್ಸಿಸಿ, ಅಬಕಾರಿ ದಳ, ಎನ್ಎಸ್ಎಸ್ ಕ್ರಮವಾಗಿ 4 ಬಹುಮಾನ ಲಭಿಸಿತು. ರಾಷ್ಟ್ರೀಯ ಮಿಲಿಟರಿ ಸ್ಕೂಲ್, ಮಿತ್ರ ಅಕಾಡೆಮಿ,ಬಾಪು ಹೈಸ್ಕೂಲ್, ಲಿಟಲ್ ್ಲವರ್ ಪಬ್ಲಿಕ್ ಸ್ಕೂಲ್, ಧಾರವಾಡದ ಎನ್.ಎ.ಮುತ್ತಣ್ಣ ಮೆಮೋರಿಯಲ್ ಶಾಲೆ, ನಂದಿನಿ ಲೇಔಟ್ನ ಪ್ರೆಸಿಡೆನ್ಸಿ ಶಾಲೆ, ಬ್ಯಾಂಡ್ ವಿಭಾಗದಲ್ಲಿ ನಾರಾಯಣಪುರದ ಕ್ರಿಸ್ತೂ ಜಯಂತಿ ಸ್ಕೂಲ್ ಮತ್ತು ಕೋರಮಂಗಲದ ಪೊಲೀಸ್ ಪಬ್ಲಿಕ್ ಶಾಲೆ ಬಹುಮಾನ ಪಡೆದುಕೊಂಡವು.