

ಬಸವರಾಜ ಕಲಾದಗಿ ಬೈಲಹೊಂಗಲ
ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸತಿ ಇಲಾಖೆ ವತಿಯಿಂದ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವದ ಜಾನಪದ ಕಲಾಮೇಳ ನೋಡುಗರ ಕಣ್ಮನ ಸೆಳೆಯಿತು.
ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಗ್ರಾಪಂ ಅಧ್ಯೆ ರೂಪಾ ಚಚಡಿ, ಉಪಾಧ್ಯ ಕೀರಪ್ಪ ಕುರಿ, ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ, ತಾಪಂ ಇಒ ಕಿರಣ ೂರ್ಪಡೆ, ತಹಸೀಲ್ದಾರ್ ಹನುಮಂತ ಶಿರಹಟ್ಟಿ, ಕನ್ನಡ ಮತ್ತು ಸಂಸತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಡೊಳ್ಳು ಬಾರಿಸುವ ಮೂಲಕ ಜಾನಪದ ಕಲಾ ಮೇಳದ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ಉತ್ಸವದ ಢಮರುಗಗಳು ಕಿತ್ತೂರು ಇತಿಹಾಸದ ರಣಕಹಳೆಯ ಸಂಕೇತವಾಗಿ ಭಾಸವಾದವು. ಡೊಳ್ಳುಗಳು ಕ್ರಾಂತಿಯ ಧ್ವನಿ ಹೊರ ಹಾಕಿದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಲಾವಿದರಿಗೆ ಗ್ರಾಮಸ್ಥರು ಚಿತ್ತಾರ ಬಿಡಿಸಿ ಬರಮಾಡಿಕೊಂಡರು. ಗ್ರಾಮದ ಬೀದಿಗಳು ತಳಿರು ತೋರಣಗಳಿಂದ ಸಿಂಗರಿಸಲ್ಪಟ್ಟಿದ್ದವು. ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.
ರಾಯಣ್ಣ ಪ್ರತಿಮೆಗೆ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅರ್ಚಕ ಬಸವರಾಜ ಡೊಳ್ಳಿನ ಪೂಜೆ ನೆರವೇರಿಸಿದರು. ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ನಂತರ ರಾಯಣ್ಣ ಸ್ಮಾರಕ ಭವನದಲ್ಲಿ ರಾಯಣ್ಣ ಜ್ಯೋತಿ ಯಾತ್ರೆ ಬರಮಾಡಿಕೊಳ್ಳಲಾಯಿತು.
ಜಾನಪದ ಕಲಾ ಮೇಳ ಮೆರವಣಿಗೆಯಲ್ಲಿ ಪುರವಂತಿಕೆ, ವೀರಗಾಸೆ, ಡೊಳ್ಳು ಕುಣಿತ, ಜಾಂಜ್ ಪಥಕ, ಸಂಬಾಳ ವಾದನ, ತಾಸೆ ವಾದನ, ಕರಡಿ ಮಜಲು, ಹಲಗೆ ವಾದನ, ಹಗಲುವೇಷ, ನಂದಿಧ್ವಜ, ಕಹಳೆ, ಚಂಡೆವಾದನ, ಕೋಳಿ ನತ್ಯ, ಚಿಲಿಪಿಲಿ ಗೊಂಬೆ, ಕಂಸಾಳೆ, ಭುವನ ವೀರಗಾಸೆ, ನಂದಿಧ್ವಜ ಹಾಗೂ ವಿವಿಧ ನತ್ಯಗಳು ನೋಡುಗರ ಗಮನ ಸೆಳೆದವು.
ಸಿಪಿಐ ಪಂಚಾರಿ ಸಾಲಿಮಠ, ತಾಲೂಕು ಆರೋಗ್ಯ ಅಧಿಕಾರಿ ಡಾ.ಎಸ್.ಎಸ್.ಸಿದ್ದನ್ನವರ, ಬಿಇಒ ಎ.ಎನ್. ಪ್ಯಾಟಿ, ಸಾಹಿತಿ ಬಸವರಾಜ ಕಮತ, ಗ್ರಾಪಂ ಸದಸ್ಯರಾದ ಬಸವರಾಜ ಕೊಡ್ಲಿ, ಇಮಾಮಹುಸೇನ ಖುದ್ದುನ್ನವರ, ರತ್ನಾ ಆನೆಮಠ, ಈರಣ್ಣ ಹಳೇಮನಿ, ಶಿವಕುಮಾರ ಪೂಜೇರ, ಬಾಬು ತಳವಾರ, ಸಂಗನಗೌಡ ಪಾಟೀಲ, ದೀಪಾ ಬಡವನ್ನವರ, ಗಂಗವ್ವ ಹೊಳೆಪ್ಪನವರ, ಮಂಜುಳಾ ಕುಡೋಳ್ಳಿ, ಸನಾ ಖುದ್ದುನ್ನವರ, ಗಂಗವ್ವ ಪೂಜೇರ, ಮಲ್ಲಿಕಾರ್ಜುನ ಕುಡೊಳ್ಳಿ, ಮಹೇಶ ಹಿರೇಮಠ, ಡಾ.ಬಿ.ಪಿ. ಹಿರೇಮಠ, ಅನಿಲ ಮೆಕಲಮರ್ಡಿ, ಪ್ರಭು ನರಗಟ್ಟಿ, ಚನ್ನಪ್ಪ ಹಕ್ಕಿ, ಬಸನಗೌಡ ಅಗಸಿಮನಿ, ಸುನೀಲ ಕುಲಕರ್ಣಿ, ಅರುಣ ಯಲಿಗಾರ, ಉಮೇಶ ಲಾಳ, ಮಹಾಂತೇಶ ಬೆಣ್ಣಿ ಇತರರಿದ್ದರು.