ದೊಡ್ಡಮ್ಮ ದೇವಾಲಯದಲ್ಲಿ ಗಮನ ಸೆಳೆದ ಅಲಂಕಾರ

ಅರಕಲಗೂಡಿನ  ಕೋಟೆ ಅಮೃತೇಶ್ವರ ಸ್ವಾಮಿ ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಿರುವುದು.
ಅರಕಲಗೂಡಿನ ಕೋಟೆ ಅಮೃತೇಶ್ವರ ಸ್ವಾಮಿ ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಿರುವುದು.
Published on

ಅರಕಲಗೂಡು: ಪಟ್ಟಣದಲ್ಲಿ ಬುಧವಾರ ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಹೋಮ, ಹವನ ನೆರವೇರಿತು. ಜನರು ದೇವಾಲಯಕ್ಕೆ ತೆರಳಿ ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಕೋಟೆ ಅಮೃತೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಸಂಜೆ ಗಿರಿಜಾ ಕಲ್ಯಾಣ, ಉತ್ಸವ ನಡೆದರೆ, ರಾತ್ರಿ ನಾಲ್ಕುಯಾಮದ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ ನಡೆಯಿತು. ಭಕ್ತರು ಶಿವನಾಮ ಸ್ಮರಣೆಯೊಂದಿಗೆ ಜಾಗರಣೆ ನಡೆಸಿದರು.

ಶಂಭುನಾಥಪುರದ ಶ್ರೀ ಸ್ವಯಂಭುನಾಥೇಶ್ವರ ಸ್ವಾಮಿ ದೇವಾಲಯದಲ್ಲಿ ರುದ್ರಾಭಿಷೇಕ, ಪೂಜೆ, ಪ್ರಸಾದ ವಿನಿಯೋಗ ನಡೆಯಿತು. ಪೇಟೆ ಶನಿದೇವರ ದೇವಾಲಯದಲ್ಲಿ ಬೆಳಗ್ಗೆ ಅಭಿಷೇಕ, ವಿವಿಧ ಪೂಜಾ ಕೈಂಕರ್ಯಗಳ ಬಳಿಕ ಗಣಪತಿ, ಮೃತ್ಯುಂಜಯ, ರುದ್ರ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಪೇಟೆ ಪ್ರಸನ್ನ ನಂಜುಂಡೇಶ್ವರ ಸ್ವಾಮಿ, ವೀರಭದ್ರೇಶ್ವರ ಸ್ವಾಮಿ, ಕೆಇಬಿ ರಸ್ತೆ ಶಕ್ತಿ ಗಣಪತಿ ದೇವಾಲಯದಲ್ಲಿ ಬೆಳಗ್ಗೆ ಮತ್ತು ರಾತ್ರಿ ವಿಶೇಷ ಪೂಜೆ, ಭಜನೆ, ಜಾಗರಣೆ ನಡೆಯಿತು. ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದಲ್ಲಿ ದೇವರಿಗೆ ಮಾಡಿದ್ದ ಶಿವನ ಅಲಂಕಾರ ಭಕ್ತರ ಗಮನ ಸೆಳೆಯಿತು.

ರಥೋತ್ಸವ ಕೋಟೆ ಅಮೃತೇಶ್ವರ ಸ್ವಾಮಿ ಮಹಾರಥೋತ್ಸವ ಫೆ.27ರಂದು ನಡೆಯಲಿದೆ. ರಥೋತ್ಸವಕ್ಕೆ ತೇರನ್ನು ಅಲಂಕರಿಸಿ ಸಿದ್ಧಗೊಳಿಸಲಾಗಿದೆ. ಕೃಷ್ಣಗಂಧೋತ್ಸವ, ವಸಂತಸೇವೆ, ರಾತ್ರಿ ಶಾಂತೋತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net