ಉಚಿತ ನೇತ್ರ ತಪಾಸಣೆ ಶಿಬಿರದಿಂದ ಬಡವರಿಗೆ ಅನುಕೂಲ

UGGINAKAERI NEW
Published on

ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದ ಕ್ಷಮತಾ ಸೇವಾ ಸಂಸ್ಥೆ, ಡಾ. ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಗಳ ಸಹಯೋಗದೊಂದಿಗೆ ಕಲಘಟಗಿ ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಮಂಗಳವಾರ ಏರ್ಪಡಿಸಲಾಗಿತ್ತು.

ಶಿಬಿರ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಉಚಿತ ನೇತ್ರ ತಪಾಸಣಾ ಶಿಬಿರ ಬಡವರು, ದೀನ ದಲಿತರಿಗೆ ಸಹಾಯವಾಗುತ್ತದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಕ್ಷಮತಾ ಸೇವಾ ಸಂಸ್ಥೆ ಈ ವಿಷಯದಲ್ಲಿ ಏರ್ಪಡಿಸುವ ಶಿಬಿರ ಜೋಶಿಯವರ ಮಾನವೀಯತೆಗೆ ಮತ್ತೊಂದು ಕೊಡುಗೆ ಎಂದರು.

ಶಿಬಿರದ ಉದ್ದೇಶದ ಕುರಿತು ಮಾತನಾಡಿದ ಡಾ. ಎಂ. ಎಂ. ಜೋಶಿ ಆಸ್ಪತ್ರೆಯ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ, ಅಂಧತ್ವ ಉಂಟಾದ ಮೇಲೆ ಸಮಸ್ಯೆ ಪರಿಹಾರಕ್ಕೆ ಪರದಾಡುವ ಬದಲು ಜಾಗರೂಕರಾಗಿದ್ದು ಅಂತಹ ಸಮಸ್ಯೆ ಬರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಸ್ತೂರೆವ್ವ ಅಧ್ಯಕ್ಷತೆ ವಹಿಸಿದ್ದರು. ಕ್ಷಮತಾ ಸಂಚಾಲಕ ಗೋವಿಂದ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಐ.ಸಿ. ಗೋಕುಲ, ಗ್ರಾಪಂ ಸದಸ್ಯರಾದ ಯಲ್ಲಪ್ಪ ವಾಲಿಕಾರ, ಮಂಜುನಾಥ ಅಲ್ಲಾಪುರ, ಬಸವರಾಜ ಮಾಂಡೇಕರ, ಮಹಾದೇವಪ್ಪ ಸುಭಾನವರ, ಬಸವಣ್ಣೆವ್ವ ಗೋಕುಲ, ಶಾಂತವ್ವ ಕಂಪ್ಲಿ, ಸವಿತಾ ದಿವಟಗಿ, ಗಂಗಾಧರ ಬಮ್ಮಿಗಟ್ಟಿ, ಬಸವರಾಜ ಜಾಧವ, ಮಂಜುನಾಥ ಹುಲಗೂರ, ಚಂದ್ರಶೇಖರ ಅಳಗವಾಡಿ, ಉಳವಪ್ಪ ಓಲೇಕಾರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಆಪ್ತ ಕಾರ್ಯದರ್ಶಿ ಮುರಲೀಧರ ಮಳಗಿ ಹಾಗೂ ಇತರರು ಇದ್ದರು.

ಸುಮಾರು 300 ಜನರ ಕಣ್ಣು ತಪಾಸಣೆ ಮಾಡಿ, 45 ಜನರನ್ನು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಉಳಿದವರಿಗೆ ಕಣ್ಣಿನ ಬಗ್ಗೆ ಇರುವ ಚಿಕ್ಕಪುಟ್ಟ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net