ಹುಬ್ಬಳ್ಳಿ: ಇಲ್ಲಿಯ ಬೈಲಪ್ಪನವರ ನಗರದ ಜಯಪ್ರಿಯಾ ಆಸ್ಪತ್ರೆಯಲ್ಲಿ ವಿಶ್ವ ದೃಷ್ಟಿ ದಿನದ ಅಂಗವಾಗಿ ಚಿಕ್ಕ ಮಕ್ಕಳ ನೇತ್ರ ತಪಾಸಣೆ ಉಚಿತ ಶಿಬಿರವನ್ನು ಅ. 14ರಿಂದ 18ರ ವರೆಗೆ ಏರ್ಪಡಿಸಲಾಗಿದೆ.
ನೇತ್ರ ತಜ್ಞ ಡಾ. ವೆಂಕಟರಾಮ ಕಟ್ಟಿ ಅವರ ನೇತೃತ್ವದಲ್ಲಿ ನಿತ್ಯ ಬೆಳಗ್ಗೆ 10ಕ್ಕೆ ತಪಾಸಣೆ ನಡೆಯಲಿದೆ. ಮಕ್ಕಳ ಪಾಲಕರಿಗೆ ರಿಯಾಯಿತಿ ದರದಲ್ಲಿ ತಪಾಸಣೆ ಮಾಡಲಾಗುವುದು ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.