ಕಣ್ಣಿನ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ, ಪಿ.ರವೀಂದ್ರ ರಾವ್ ಹೇಳಿಕೆ

mng--12 Sep Eye camp
Published on

ಮಂಗಳೂರು: ಭಗವಂತ ನೀಡಿದ ಕಣ್ಣನ್ನು ಪ್ರತಿಯೊಬ್ಬರೂ ರಕ್ಷಣೆ ಮಾಡುವುದು ಕರ್ತವ್ಯ ಎಂದು ದ.ಕನ್ನಡ ಅಂಧರ ಸೇವಾ ಸಂಘದ ಕಾರ್ಯದರ್ಶಿ ಪಿ.ರವೀಂದ್ರ ರಾವ್ ಹೇಳಿದರು.


ಅಂಧರ ಸೇವಾ ಸಂಘ ದಕ್ಷಿಣ ಕನ್ನಡ ಮತ್ತು ಲಯನ್ಸ್ ಕ್ಲಬ್, ಮುಂಡ್ಕೂರು ಕಡಂದಲೆ ಇದರ ಜಂಟಿ ಆಶ್ರಯದಲ್ಲಿ ಸಚ್ಚರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 255ನೇ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಹುಟ್ಟಿನಿಂದಲೇ ದೃಷ್ಟಿಯನ್ನು ಕಳೆದುಕೊಂಡವರು ಪ್ರಪಂಚವನ್ನು ನೋಡುವ ಭಾಗ್ಯದಿಂದ ವಂಚಿತರಾಗಿದ್ದಾರೆ. ಆದರೆ ಬಹಳಷ್ಟು ಮಂದಿ ತಮ್ಮ ನಿರ್ಲಕ್ಷೃದಿಂದ ಕಣ್ಣು ಕಳೆದುಕೊಂಡವರಿದ್ದಾರೆ. ಆದ ಕಾರಣ ದೃಷ್ಟಿ ಇದ್ದವರು ಕಣ್ಣಿನ ರಕ್ಷಣೆಗೆ ಒತ್ತು ನೀಡುವುದು ಅವಶ್ಯ. ಸೇವಾ ಸಂಘವು ಸತತ 42 ವರ್ಷಗಳಿಂದ ನಿರಂತರವಾಗಿ ಉಚಿತ ನೇತ್ರ ತಪಾಸಣ ಶಿಬಿರಗಳನ್ನು ಮಾಡಿ ಲಕ್ಷಾಂತರ ಮಂದಿಗೆ ಉಚಿತ ಕನ್ನಡಕ, ಉಚಿತ ಕ್ಯಾಟರ‌್ಯಾಕ್ಟ್ ಚಿಕಿತ್ಸೆಯನ್ನು ಹಾಗೂ ಔಷಧ ನೀಡಿ ಸಾಮಾಜಿಕವಾಗಿ ಸ್ಪಂದಿಸಿದ್ದೇವೆ ಎಂದರು.


ನೇತ್ರ ತಜ್ಞ ಡಾ.ಜಯರಾಮ ಶೆಟ್ಟಿ ಸಹಕರಿಸಿದರು. ಶಿಬಿರದಲ್ಲಿ ಸುಮಾರು 100ರಷ್ಟು ಕನ್ನಡಕವನ್ನು 50 ಮಂದಿಗೆ ಔಷಧ ಹಾಗೂ 18 ಮಂದಿಗೆ ಶಸ್ತ್ರ ಚಿಕಿತ್ಸೆಗೆ ನೊಂದಾಯಿಸಲಾಯಿತು. ಲಯನ್ಸ್ ಅಧ್ಯಕ್ಷ ಸಂದೀಪ್ ಶೆಟ್ಟಿ, ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ರಾಜ್‌ರಾಂ ರೈ ಹಾಗೂ ಅಂಧರ ಸೇವಾ ಸಂಘದ ಪದಾಧಿಕಾರಿಗಳಾದ ವೈ.ಆರ್.ಭಟ್, ಎಂ.ವಿ.ಸುಬ್ರಹ್ಮಣ್ಯ, ಪಿ.ಶೋಭಾರಾವ್, ಪಿ. ಸುರೇಂದ್ರ ರಾವ್, ಸುರೇಶ್ ಬಿ.ವಿ. ಮಂಗಳಾಭಟ್, ನೀರದಾ, ಮಾನಸ, ಸ್ವರ್ಣ ಆರ್. ಭಟ್ ಸಹಕರಿಸಿದರು.
ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಕೆ. ಸತ್ಯ ಶಂಕರ ಶೆಟ್ಟಿ ಸ್ವಾಗತಿಸಿ, ಲಯನ್ಸ್ ಕಾರ್ಯದರ್ಶಿ ಆನಂದ ಆಚಾರ್ಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net