ಗಂಗಿವಾಳದಲ್ಲಿ ನೇತ್ರ ತಪಾಸಣೆ ಶಿಬಿರ

IMG_20240726_211105_891.jpg
Published on

ಹುಬ್ಬಳ್ಳಿ: ಇಲ್ಲಿಯ ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸಹಭಾಗಿತ್ವದಲ್ಲಿ ಗಂಗಿವಾಳದಲ್ಲಿ ಏರ್ಪಡಿಸಿರುವ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಸಾರ್ವಜನಿಕರ ನೇತ್ರ ತಪಾಸಣೆ ನಡೆಸಲಾಯಿತು.

ಶುಕ್ರವಾರ ಕಾರ್ಗಿಲ್ ವಿಜಯೋತ್ಸವ ದಿನದ ಅಂಗವಾಗಿ ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ನೇತ್ರ ತಪಾಸಣೆ ಶಿಬಿರ ನಡೆಯಿತು.

ಅತಿಥಿಯಾಗಿದ್ದ ಎಪಿಎಂಸಿ ಮಾಜಿ ಸದಸ್ಯ ಚನ್ನು ಹೊಸಮನಿ, ಕಾರ್ಗಿಲ್ ದಿವಸದ ಧ್ಯೋತಕವಾಗಿ ಹುತಾತ್ಮರಾದ 527 ಸೈನಿಕರ ಹೆಸರಲ್ಲಿ 527 ಗಿಡಗಳನ್ನು ನೆಟ್ಟು ಪ್ರತಿಯೊಂದು ಗಿಡಕ್ಕೂ ಹುತಾತ್ಮರ ಹೆಸರು ನಾಮಕರಣ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಮೂಲಕ ಅವರಿಗೆ ನಮನ ಸಲ್ಲಿಸಲಾಗುತ್ತಿದೆ ಎಂದರು.

ಅಭಿಷೇಕ ಜಾಗಿರದಾರ ಮಾತನಾಡಿ, ಕಾರ್ಗಿಲ್ ವಿಜಯೋತ್ಸವದ ಮಹತ್ವ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ದೀಪಾ ಪಾಟೀಲ, ಕಣ್ಣು ದೇಹದ ಅತ್ಯಂತ ಸುಂದರ ಹಾಗೂ ಸೂಕ್ಷ್ಮ ಅಂಗ, ಕಣ್ಣಿನ ಆರೋಗ್ಯವನ್ನು ನಾವೆಲ್ಲ ಕಾಪಾಡಿಕೊಳ್ಳಬೇಕು, ಪ್ರಕತಿಗೆ ಕಣ್ಣಿನ ಆರೋಗ್ಯ ವೃದ್ಧಿಸುವ ಶಕ್ತಿ ಇದೆ ಎಂದು ತಿಳಿಸಿದರು.

ಶಿಬಿರದಲ್ಲಿ ಗಂಗಿವಾಳ ಗ್ರಾಮದ 50ಕ್ಕೂ ಅಧಿಕ ಜನರು ಶಿಬಿರದ ಪ್ರಯೋಜನ ಪಡೆದರು.
ಪ್ರೊ. ಬಾಬುಲಾಲ ದರಗದ, ಪ್ರೊ. ಶ್ರೀಶೈಲ ಮುಧೋಳ, ಪ್ರೊ. ಪೂರ್ಣಿಮಾ ಕುರಡಿಕೇರಿ, ಸುರೇಶ ಲಿಂಬಿಕಾಯಿ, ಸತೀಶ ಸಿ.ವಿ. ಭಾಗವಹಿಸಿದ್ದರು.

ಅಭಿಷೇಕ ಮಟ್ಟಿ ಸ್ವಾಗತಿಸಿದರು. ಲಕ್ಷ್ಮಿ ಶಾಡಂಬಿ ಪ್ರಾರ್ಥನೆ ಹಾಡಿದರು. ಸುನೀಲ ರಾಠೋಡ ನಿರೂಪಿಸಿದರು. ನವೀನ ಲಿಂಬಿಕಾಯಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net