ಕಣ್ಣಿನ ಬಗ್ಗೆ ಕಾಳಜಿ ಇರಲಿ

24A LD03
ಅಳವಂಡಿ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಪಿಎಚ್‌ಸಿ ಅಳವಂಡಿವತಿಯಿಂದ ಮಕ್ಕಳ ನೇತ್ರ ತಪಾಸಣಾ ಶಿಬಿರ ನಡೆಯಿತು. ನೇತ್ರಾಧಿಕಾರಿ ಸಿದ್ದಪ್ಪ ಕಲ್ಯಾಣಿ, ಹಿರಿಯ ಶಿಕ್ಷಕ ವಿ.ಎಚ್.ಪುಲೇಶಿ, ಶಿಕ್ಷಕರಾದ ಹನುಮಂತ ಲಮಾಣಿ, ಎಂ.ಎಸ್.ಕೊಪ್ಪಳ ಇದ್ದರು.
Published on

ಅಳವಂಡಿ: ದೇಹದ ಪಂಚೇಂದ್ರಿಯಗಳಲ್ಲಿ ಒಂದಾದ ಕಣ್ಣು ಬೆಳಕನ್ನು ಕಾಣುವ ಜ್ಞಾನೇಂದ್ರಿಯವಾಗಿದೆ. ಇದರ ರಕ್ಷಣೆ ಅತಿ ಮುಖ್ಯ ಎಂದು ನೇತ್ರಾಧಿಕಾರಿ ಸಿದ್ದಪ್ಪ ಕಲ್ಯಾಣಿ ತಿಳಿಸಿದರು.

ಗ್ರಾಮದ ಶ್ರೀಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲೆ ವಿಭಾಗದ ಮಕ್ಕಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಅಳವಂಡಿವತಿಯಿಂದ ನಡೆದ ನೇತ್ರ ತಪಾಸಣೆ ಶಿಬಿರದಲ್ಲಿ ಶುಕ್ರವಾರ ಮಾತನಾಡಿದರು.

ಮಾನವನ ದೇಹದಲ್ಲಿ ಅತಿ ಸೂಕ್ಷ್ಮವಾಗಿ ಕಣ್ಣು ರಚನೆಯಾಗಿದೆ. ಆಗಾಗ ಕಣ್ಣನ್ನು ಸ್ವಚ್ಚಗೊಳಿಸುತ್ತ ಹಾಗೂ ತಪಾಸಣೆ ಮಾಡತ್ತಿರಬೇಕು ಎಂದರು.
ಶಾಲಾ ಮಕ್ಕಳ ನೇತ್ರ ತಪಾಸಣೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಯಿತು.

ಹಿರಿಯ ಶಿಕ್ಷಕ ವಿ.ಎಚ್.ಪುಲೇಶಿ, ಶಿಕ್ಷಕರಾದ ಹನುಮಂತ ಲಮಾಣಿ, ಎಂ.ಎಸ್.ಕೊಪ್ಪಳ, ವಿ.ಐ.ಸರ್ವಶೆಟ್ಟಿ, ಅಂಬರೀಶ ಬೋಚನಹಳ್ಳಿ, ಪರಶುರಾಮ ಕಟ್ಟಿಮನಿ, ಗಾಯತ್ರಿ ಮಾಲಿಪಾಟೀಲ, ಶಕುಂತಲಾ ಹಿರೇಮಠ, ಎಸ್.ಆರ್.ಗೊಲ್ಲರ, ಮಹೇಶ ಮಾಳೆಕೊಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net