ವಲಸೆ ಬಂದಿರುವ ಮಂಗಗಳ ವಿಪರೀತ ಕಾಟ, ಸ್ಥಳೀಯ ಪರದಾಟ

oplus_0
oplus_0
Published on

ಚಿಕ್ಕಬಳ್ಳಾಪುರ: ವ್ಯಾಪಕವಾಗಿ ಸುಡು ಬಿಸಿಲು, ಮತ್ತೊಂದೆಡೆ ಮಳೆ ಇಲ್ಲ. ಇನ್ನೂ ತಿನ್ನಲು ಆಹಾರ ಸಿಗುತ್ತಿಲ್ಲ. ಇದಕ್ಕೆ ಬೆಟ್ಟಗುಡ್ಡ ಮತ್ತು ಅರಣ್ಯ ಪ್ರದೇಶಗಳಲ್ಲಿರುವ ಕೋತಿಗಳು ನಗರ ಪಟ್ಟಣ ಪ್ರದೇಶಗಳತ್ತ ಲಗ್ಗೆ ಇಡುತ್ತಿದ್ದು ಜನರಿಗೆ ದೊಡ್ಡ ತಲೆ ನೋವಾಗಿ ಪರಿಣಿಮಿಸಿದೆ.
ಬೆಟ್ಟದಲ್ಲಿ ಮತ್ತು ಅರಣ್ಯಗಳಲ್ಲಿ ಸದಾ ಕಾಲ ಇರುತ್ತಿದ್ದ ಕೋತಿಗಳ ಹಿಂಡು ಆಹಾರ ಮತ್ತು ನೀರಿನ ಕೊರತೆಯಿಂದಾಗಿ ನಗರ, ಪಟ್ಟಣ ಪ್ರದೇಶಗಳ ಕಡೆಗೆ ವಲಸೆ ಬರುತ್ತಿದ್ದು ಮನೆಗಳ ಬಳಿಕ ಒಣಗಲು ಹಾಕಿರುವ ಬಟ್ಟೆಗಳನ್ನು ಕಿತ್ತು ಹಾಕುವುದು, ಮಲಮೂತ್ರ ವಿರ್ಸರ್ಜನೆ, ಮನೆಯೊಳಕ್ಕೆ ಪ್ರವೇಶಿಸಿ ಹಣ್ಣು ಮತ್ತು ಆಹಾರ ಪದಾರ್ಥಗಳನ್ನು ಎತ್ತಿಕೊಂಡು ಹೋಗುವುದು, ಜನರ ಮೇಲೆ ಮುಗಿ ಬೀಳುವುದು ಸೇರಿದಂತೆ ನಾನಾ ಕಿರಿಕಿರಿಯನ್ನುಂಟು ಮಾಡುತ್ತಿವೆ.
ಹಾಗೆಯೇ ದ್ವಿಚಕ್ರ ವಾಹನ, ಕಾರು ಸೇರಿದಂತೆ ಇತರ ವಾಹನಗಳ ಸೀಟುಗಳು, ಕನ್ನಡಿ, ಬಡಾವಣೆಗಳಲ್ಲಿನ ಕೇಬಲ್ ವಯರ್‌ಗಳನ್ನು ಹಾಕುತ್ತಿದ್ದು ಇವುಗಳ ನಿಯಂತ್ರಣಕ್ಕೆ ಹರಸಾಹಸ ಮಾಡುವಂತಾಗಿದೆ. ಚಿಲ್ಲರೆ ಅಂಗಡಿ ಮತ್ತು ತಳ್ಳುವ ಗಾಡಿಗಳಲ್ಲಿನ ಹಣ್ಣು, ತಿಂಡಿ ತಿನಿಸುಗಳನ್ನು ಕಿತ್ತುಕೊಂಡು ಹೋಗುತ್ತಿರುವುದರಿಂದ ವ್ಯಾಪಾರಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.


ಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net