

ಚಿಕ್ಕೋಡಿ: ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಅವಶ್ಯಕ ಎಂದು ಕೋಥಳಿಯ ಕ್ಷೇತ್ರ ಸಮೂಹ ಸಂಪನ್ಮೂಲ ಅಧಿಕಾರಿ ಶಿವಲೀಲಾ ಹಿಪ್ಪರಗಿ ಹೇಳಿದರು.
ತಾಲೂಕಿನ ಚಿಂಚಣಿ ಗ್ರಾಮದ ಅಲ್ಲಮಪ್ರಭು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಂಗೋತ್ಸವ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಿಕೆಯೊಂದಿಗೆ ಕಲೆ, ಕಲೆಯೊಂದಿಗೆ ಕಲಿಕೆ ಎಂಬಂತೆ ಶಿಕ್ಷಣ ಇಲಾಖೆ ಆಯೋಜಿಸಿರುವ ರಂಗೋತ್ಸವ ಕಾರ್ಯಕ್ರಮ ವಿಶಿಷ್ಟ ಎಂದರು.
ಮುಖ್ಯಶಿಕ್ಷಕ ಎ.ಎಂ. ದೀಪಂಕರ, ಚಂದ್ರಶೇಖರ ಚಿನಕೇಕರ ಮಾತನಾಡಿದರು.ವಿದ್ಯಾರ್ಥಿಗಳು ಗೀತ ಗಾಯನ, ನೃತ್ಯ, ನಾಟಕ, ಡೊಳ್ಳು ಕುಣಿತ ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ಶಿಕ್ಷಕರಾದ ರವೀಂದ್ರ ಕೆಳಗಡೆ, ವಿ.ಎಸ್. ಪಾಟೀಲ, ಎ.ಎಂ.ಖೋತ, ಯು.ಬಿ.ಲೋಕರೆ, ಎಸ್.ವಿ.ದೇಶಪಾಂಡೆ, ಎ.ಎ.ಪಾಟೀಲ ಇತರರಿದ್ದರು. ಕೆ.ಸಿ.ಉಪಾಧ್ಯೆ ಸ್ವಾಗತಿಸಿದರು. ಎಂ.ಬಿ.ಪಾಟೀಲ ನಿರೂಪಿಸಿದರು. ಎನ್.ಎ.ಕುಲಕರ್ಣಿ ವಂದಿಸಿದರು.