

ಸಿರಗುಪ್ಪ: ಕ್ರಿಡಾಪಟುಗಳಿಗೆ ಹಣದ ನೆರವು ನೀಡುವುದರೊಂದಿಗೆ ಸೂಕ್ತ ತರಬೇತಿ, ಪ್ರೊತ್ಸಾಹ ನೀಡಬೇಕು ಎಂದು ನಗರಸಭೆ ಅಧ್ಯಕ್ಷೆ ಬಿ. ರೇಣುಕಮ್ಮ ಹೇಳಿದರು.
ಇದನ್ನೂ ಓದಿ:
ತಾಲೂಕು ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಯಿಂದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಬಾಲಕ-ಬಾಲಕಿಯರ ಕ್ರಿಡಾಕೂಟಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.
ಪಠ್ಯದ ಜತೆಗೆ ಪಠ್ಯೆತರ ಚಟುವಟಿಕೆಗಳಿಗೂ ಒತ್ತು ನೀಡಿದಾಗ ಪ್ರತಿಭೆ ಅನಾವರಣಗೊಳ್ಳಲಿದೆ. ಇಬ್ಬರು ವಿಕಲಚೇತನರು ಸ್ಪರ್ಧೆ ಮಾಡುವ ಮೂಲಕ ಒಲಿಂಪಿಕ್ಸ್ ಪಂದ್ಯದಲ್ಲಿ ಸಾಧನೆ ಮಾಡಿದ್ದಾರೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಮನಹರಿಸಬೇಕಿದೆ ಎಂದರು.
ಟಿಪಿಒ ರಮೇಶ ಮಾತನಾಡಿ, ಪ್ರಾಥಮಿಕ ಶಿಕ್ಷಣದೊಂದಿಗೆ ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸುವುದರಿಂದ ಉತ್ತಮ ಪ್ರತಿಭೆಗಳನ್ನು ಪತ್ತೆ ಹಚ್ಚಲು ಸಹಕಾರಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆಯಲು ಉಂಟಾಗುತ್ತಿರುವ ತೊಡಕು ನಿವಾರಣೆಯಾಗಲಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಶೆಕ್ಷಣಿಕ ಪ್ರಗತಿಯಲ್ಲಿ ಗುರಿ ಸಾಧಿಸಬೇಕು ಎಂದರು.
ಸರ್ಕಾರಿ ದೈಹಿಕ ಶಿಕ್ಷಕರ ಸಂಘದ ಗ್ರೇಡ್-2 ರಾಜ್ಯ ಉಪಾಧ್ಯಕ್ಷ ಈರಣ್ಣ, ಕ್ಷೇತ್ರ ಸಮನ್ವಯಾಧಿಕಾರಿ ತಮ್ಮನಗೌಡ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕರಿಬಸಪ್ಪ, ಸಿ.ಆರ್.ಪಿ ಮಾರುತಿ, ಬಿ.ಆರ್.ಸಿ ವಿರೇಶ್, ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಚನ್ನಪ್ಪ, ದೈಹಿಕ ಶಿಕ್ಷಕರಾದ ವೈ.ಡಿ ವೆಂಕಟೇಶ್, ಉಪೇಂದ್ರ, ಅಜ್ಮೀರ, ಉಸ್ಮನ್, ದಾನಪ್ಪ, ಶಾರದ, ಮಲ್ಲಮ್ಮ, ಸುವರ್ಣ, ಕಿರಣ್ ಕುಮಾರ್, ವೈ.ಡಿ ಮಂಜು, ನಾಗರಾಜ, ಖಾದರಭಾಷ, ರಾಮಮೂರ್ತಿ, ವೈ.ಚಿದಾನಂದ ಇತರರಿದ್ದರು.