ಪಠ್ಯೇತರ ಚಟುವಟಿಕೆ ಜ್ಞಾನ ವೃದ್ಧಿಗೆ ಪೂರಕ

12MDLG6
Published on

ಮೂಡಲಗಿ: ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಕೂಡ ಜ್ಞಾನಾಬಿವದ್ಧಿಗೆ ಪೂರಕವಾಗುತ್ತವೆ ಎಂದು ತುಕ್ಕಾನಟ್ಟಿ ಪ್ರಾಥಮಿಕ ಶಾಲೆಯ ಪ್ರಧಾನ ಗುರು ಎ.ವಿ. ಗಿರೆಣ್ಣವರ ಹೇಳಿದರು.

ತಾಲೂಕಿನ ತುಕ್ಕಾನಟ್ಟಿಯ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಠ್ಯೇತರ ವಿಷಯಗಳನ್ನೊಳಗೊಂಡ ಶುಕ್ರವಾರ ಸಂಜೆ ಎಂಬ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.ವಿದ್ಯಾರ್ಥಿಗಳಿಗೆ 1&4 ಹಾಗೂ 5&8 ತರಗತಿಗಳ ವಿಭಾಗ ಮಾಡಿ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನೋಡಲ್​ ಶಿಕರಾಗಿ ಲಕ್ಷಿ$್ಮ ಹೆಬ್ಬಾಳ ಕಾರ್ಯನಿರ್ವಹಿಸಿದರು.

ನಲಿಕಲಿ ತರಗತಿ ವಿಭಾಗದಲ್ಲಿ ಪವಿತ್ರಾ ಬಡಿಗೇರ ಮಾರ್ಗದರ್ಶನದ ತಂಡ ಪ್ರಥಮ, ರೂಪಾ ಹೂಲಿಕಟ್ಟಿ ಮಾರ್ಗದರ್ಶನದ ತಂಡ ದ್ವೀತಿಯ, ಶಿವಲೀಲಾ ಹಣಮನ್ನವರ ಮಾರ್ಗದರ್ಶನದ ತಂಡ ತತೀಯ ಸ್ಥಾನ ಪಡೆದರೆ, 5&8 ತರಗತಿ ವಿಭಾಗದಲ್ಲಿ ಪುಷ್ಪಾ ಭರಮದೆ ಮಾರ್ಗದರ್ಶನದ ತಂಡ ಪ್ರಥಮ, ಚನ್ನಬಸಪ್ಪ ಸೀರಿ ಮಾರ್ಗದರ್ಶನದ ತಂಡ ದ್ವೀತಿಯ, ವಾಸಂತಿ ಬೋರಗುಂಡಿ ಮಾರ್ಗದರ್ಶನದ ತಂಡ ತತೀಯ ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.

ಶಿಕಿ ವಿಮಲಾ ತೋರಗಲ್​, ಮಹಾದೇವ ಗೋಮಾಡಿ, ಬಿ.ಎನ್​.ಬಿನಾಯ್ಕ, ಪ್ರಿಯಾಂಕಾ ಡಿ.ಕೆ., ಸೋಮಶೇಖರ ವೈ.ಆರ್​.ಸುಜಾತಾ ಕೋಳಿ, ಭಾಗೀರಥಿ ಕಳ್ಳಿಗುದ್ದಿ, ಹೊಳೆಪ್ಪ ಗದಾಡಿ, ಯಮುನಾ ಹಮ್ಮನವರ, ಅನ್ನಪೂರ್ಣಾ ಹುಲಕುಂದ, ಖಾತೂನ ನದ್​ಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net