ಪಠ್ಯೇತಚ ಚಟುವಟಿಕೆಯಿಂದ ಆತ್ಮವಿಶ್ವಾಸ ಹೆಚ್ಚಳ

Sirguppa School
ಸಿರಗುಪ್ಪದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಭಾಷಣ ಸ್ಪರ್ಧೆ ಉದ್ಘಾಟನೆ ವೇಳೆ ನಿವೃತ್ತ ಇಂಜಿನಿಯರ್ ಮೋಹನ್ ರೆಡ್ಡಿ, ಡಾ.ಮಧುಸೂದನ ಕಾರಿಗನೂರು, ಮುಖ್ಯಶಿಕ್ಷಕ ವೆಂಕಟೇಶ ಯಾದವ್, ಹಾಸ್ಯ ಕಲಾವಿದ ನರಸಿಂಹಮೂರ್ತಿ ಇದ್ದರು.
Published on

ಸಿರಗುಪ್ಪ: ನಿರಂತರ ಅಭ್ಯಾಸ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಶಿಕ್ಷಣ ಪ್ರೇಮಿ, ನಿವೃತ್ತ ಇಂಜಿನಿಯರ್ ಮೋಹನ್ ರೆಡ್ಡಿ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಏರ್ಪಡಿಸಿದ್ದ ‘ನಮ್ಮ ಆರೋಗ್ಯ ನಮ್ಮ ಕೈಯಲ್ಲಿ’ ವಿಷಯದ ಕುರಿತು ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಠ್ಯದೊಂದಿಗೆ ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ ಎಂದು ತಿಳಿಸಿದರು. ಹಾಸ್ಯ ಕಲಾವಿದ ನರಸಿಂಹಮೂರ್ತಿ ಮಾತನಾಡಿ, ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಿಕೆಯಿಂದ ಮಕ್ಕಳಲ್ಲಿ ಧೈರ್ಯ ಮತ್ತು ದೃಢವಿಶ್ವಾಸ ಬರಲಿದೆ. ಇಂಥ ಸ್ಪರ್ಧೆಗಳಲ್ಲಿ ವಾಕ್ ಚಾತುರ್ಯ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.

ಮುಖ್ಯಶಿಕ್ಷಕ ವೆಂಕಟೇಶ್ ಯಾದವ್, ಡಾ.ಮಧುಸೂದನ ಕಾರಿಗನೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net