

ಮಂಗಳೂರು : ಚೆನ್ನೈ ಎಗ್ಮೋರ್-ಮಂಗಳೂರು ಸೆಂಟ್ರಲ್ ಮಧ್ಯೆ ಓಡಾಡುವ ಎಕ್ಸ್‌ಪ್ರೆಸ್ ರೈಲು (ನಂ.16159/16160)
ಹೆಚ್ಚುವರಿಯಾಗಿ ಎರಡು ಜನರಲ್ ಸೆಕೆಂಡ್ ಕ್ಲಾಸ್ ಕೋಚ್ ಸೌಲಭ್ಯ ಹೊಂದಲಿದೆ. ಸೆ.4ರಿಂದ ಹೆಚ್ಚುವರಿ ಬೋಗಿಗಳ ಅಳವಡಿಕೆಯಲಿದ್ದು, ಒಟ್ಟು 3-ಎಸಿ ತ್ರಿ ಟಯರ್ ಕೋಚ್, 11 -ಸ್ಲೀಪರ್ ಕ್ಲಾಸ್ ಕೋಚ್, 4-ಜನರಲ್ ಸೆಕೆಂಡ್ ಕ್ಲಾಸ್ ಕೋಚ್, 2-ಸೆಕೆಂಡ್ ಕ್ಲಾಸ್ ಚೇರ್ ಕಾರ್ ಕೋಚ್, 2-ಲಗ್ಗೇಜ್ /ಬ್ರೇಕ್ ವ್ಯಾನ್ ಕೋಚ್ ಸೌಲಭ್ಯ ಹೊಂದಲಿದೆ ಎಂದು ಪ್ರಕಟಣೆ ತಿಳಿಸಿದೆ.