ಕಲಿಕೆ ಹಬ್ಬವಾಗಲು ಪಠ್ಯಪೂರಕ ಚಟುವಟಿಕೆ ಸಹಕಾರಿ

Extra-curricular activities help make learning a festival
ಬನಹಟ್ಟಿಯ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಥಾವನ-2025 ಕಾರ್ಯಕ್ರಮಕ್ಕೆ ತಾಲೂಕು ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಚಾಲನೆ ನೀಡಿದರು. ಎನ್. ವಿ. ನಿಂಬರಗಿ, ಮಾಧವಾನಂದ ಗುಟ್ಲಿ, ಶ್ರೀಶೈಲ ದಾವಲಟ್ಟಿ ಮತ್ತಿತರರಿದ್ದಾರೆ.
Published on

ರಬಕವಿ/ಬನಹಟ್ಟಿ: ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯವನ್ನು ಅರಿತು ಅವರಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವ ಕಥೆಗಳನ್ನು ಹೇಳಬೇಕು. ಕಲಿಕೆಯು ಮಕ್ಕಳಿಗೆ ಹಬ್ಬವಾಗಲು ಪಠ್ಯಪೂರಕ ಚಟುವಟಿಕೆಗಳು ಸಹಕಾರಿ ಎಂದು ತಾಲೂಕು ಕಸಾಪ ಅಧ್ಯಕ್ಷ, ಕಥಾವನ ಸಂಪನ್ಮೂಲ ವ್ಯಕ್ತಿ ಮ.ಕೃ.ಮೇಗಾಡಿ ಹೇಳಿದರು.

ಬನಹಟ್ಟಿಯ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ಅಜೀಂ ಪ್ರೇಮ್‌ಜಿ ೌಂಡೇಷನ್ ಬಾಗಲಕೋಟೆ ಇವರ ಸಹಯೋಗದಲ್ಲಿ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಕಥಾವನ-2025 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೃಜನಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಲು, ಬರವಣಿಗೆ ಕೌಶಲ ಅಭಿವೃದ್ಧಿಗೆ ಈ ಕಥಾವನ ಚಟುವಟಿಕೆಗಳು ಪ್ರೇರಣೆ ನೀಡುತ್ತವೆ ಎಂದರು.

ಪ್ರಾಚಾರ್ಯ ಡಾ. ಎಂ.ವಿ. ಬೂದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾವಿ ಶಿಕ್ಷಕರಿಗೆ ಸಾಹಿತ್ಯದಲ್ಲಿ ಅಭಿರುಚಿ ಬೆಳೆಸಲು ಕಥಾವನ ಸಹಕಾರಿಯಾಗಲಿದೆ. ಅಜೀಂ ಪ್ರೇಮ್‌ಜಿ ೌಂಡೇಷನ್ ಸಮಾಜಮುಖಿ, ಶೈಕ್ಷಣಿಕ ಕಾರ್ಯಗಳು ಶ್ಲಾಘನೀಯವಾಗಿವೆ ಎಂದರು.

ಕಾಲೇಜಿನ ಕನ್ನಡ ಭಾಷಾ ಸಂಘದ ಕಾರ್ಯದರ್ಶಿ ಎನ್. ವಿ. ನಿಂಬರಗಿ, ಪ್ರೊ. ಮಾಧವಾನಂದ ಗುಟ್ಲಿ ವೇದಿಕೆಯಲ್ಲಿದ್ದರು.

ಅಜೀಂ ಪ್ರೇಮ್ ಜಿ ೌಂಡೇಷನ್ ಸಂಪನ್ಮೂಲ ವ್ಯಕ್ತಿ ಶ್ರೀಶೈಲ ದಾವಲಟ್ಟಿಯವರು ಕಥಾವನದಲ್ಲಿ ಕಾಲ್ಪನಿಕ ಕಥೆ ಕಟ್ಟುವ, ಸೃಜನಾತ್ಮಕವಾಗಿ ಕಥೆ ರೂಪಿಸುವ, ಕಥಾ ಬರವಣಿಗೆ, ಚಿತ್ರ ನೋಡಿ ಕಥೆ ಹೇಳುವ ಚಟುವಟಿಕೆಗಳನ್ನು ಪ್ರಶಿಕ್ಷಣಾರ್ಥಿಗಳಿಂದ ಮಾಡಿಸಿದರು.

ಸವಿತಾ ಗಾರವಾಡ ಪ್ರಾರ್ಥಿಸಿದರು. ಬೋರಮ್ಮಾ ಮಾದಪ್ಪಗೋಳ ಸ್ವಾಗತಿಸಿದರು. ಲಕ್ಷ್ಮೀ ಸವದತ್ತಿ, ಬಿಂದು ನಾಯಕ ನಿರೂಪಿಸಿದರು. ಸೀಮಾ ಬುರುಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net