

ಮಂಗಳೂರು : ವಿಜಯಪುರ -ಮಂಗಳೂರು ಸೆಂಟ್ರಲ್ -ವಿಜಯಪುರ ಸ್ಪೆಷಲ್ ಎಕ್ಸ್‌ಪ್ರೆಸ್ (ನಂ.07377/07378) ರೈಲಿಗೆ 1-ಎಸಿ ಟು ಟಯರ್ ಕೋಚ್ ಮತ್ತು 2-ಎಸಿ ತ್ರಿ ಟಯರ್ ಕೋಚ್ ಅಳವಡಿಕೆಯಾಗಲಿದೆ . ನ.3ರಂದು ವಿಜಯಪುರದಿಂದ ಹೊರಡುವ ಹಾಗೂ ನ.4ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ರೈಲು ಈ ಹೆಚ್ಚುವರಿ ಬೋಗಿ ಸೌಲಭ್ಯ ಹೊಂದಲಿದೆ. ಈ ರೈಲು ಒಟ್ಟು 1-ಎಸಿ ಟು ಟಯರ್ ಕೋಚ್, 3-ಎಸಿ ತ್ರಿ ಟಯರ್ ಕೋಚ್, 6- ಸ್ಲೀಪರ್ ಕ್ಲಾಸ್ ಕೋಚ್, 4-ಜನರಲ್ ಸೆಕೆಂಡ್ ಕ್ಲಾಸ್ ಕೋಚ್ ಮತ್ತು 2-ಸೆಕೆಂಡ್ ಕ್ಲಾಸ್ ಲಗ್ಗೇಜ್ ಕಂ ಬ್ರೇಕ್ ವ್ಯಾನ್ ಕೋಚ್ ಹೊಂದಿದೆ.
ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ರೈಲಿಗೆ (ನಂ.16603/16604) ತಾತ್ಕಾಲಿಕವಾಗಿ 1 ಹೆಚ್ಚುವರಿ ಸ್ಪೀಪರ್ ಕೋಚ್ ಅಳವಡಿಕೆಯಾಗಲಿದೆ. ನ.3ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಹಾಗೂ ನ.4ರಂದು
ತಿರುವನಂತಪುರಂ ಸೆಂಟ್ರಲ್‌ನಿಂದ ಹೊರಡುವ ರೈಲು ಈ ಹೆಚ್ಚುವರಿ ಬೋಗಿ ಸೌಲಭ್ಯ ಹೊಂದಲಿದೆ ಎಂದು ಪ್ರಕಟಣೆ ತಿಳಿಸಿದೆ.