ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಹೆಚ್ಚುವರಿ ಬೋಗಿ ಅಳವಡಿಕೆ

images
Published on


ಮಂಗಳೂರು : ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಮಧ್ಯೆ ಓಡಾಡುವ ಮಾವೇಲಿ ಎಕ್ಸ್‌ಪ್ರೆಸ್ ರೈಲು (ನಂ.16603/16604) ಹೆಚ್ಚುವರಿಯಾಗಿ 1-ತ್ರಿ ಟಯರ್ ಎಸಿ ಕೋಚ್ ಸೌಲಭ್ಯ ಹೊಂದಲಿದೆ. ಸೆ.25ರಿಂದ ನ.3ರವರೆಗೆ ಈ ಹೆಚ್ಚುವರಿ ಬೋಗಿ ಅಳವಡಿಕೆಯಾಗಲಿದೆ.
ಹಿಸಾರ್-ಕೊಯಮುತ್ತೂರು ಜಂಕ್ಷನ್ -ಹಿಸಾರ್ ಮಧ್ಯೆ ಓಡಾಡುವ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (ನಂ.22475/22456) ಹೆಚ್ಚುವರಿಯಾಗಿ 1- ಎಸಿ ತ್ರಿ ಟಯರ್ ಕೋಚ್ ಸೌಲಭ್ಯ ಹೊಂದಲಿದೆ. ಅ.2ರಿಂದ ಈ ಹೆಚ್ಚುವರಿ ಬೋಗಿ ಅಳವಡಿಕೆಯಾಗಲಿದೆ. ಈ ರೈಲು 1-ಎಸಿ ಫಸ್ಟ್ ಕ್ಲಾಸ್ ಕೋಚ್, 5-ಎಸಿ ಟು ಟಯರ್ ಕೋಚ್, 13-ಎಸಿ ತ್ರಿ ಟಯರ್ ಕೋಚ್, 1-ಎಸಿ ಪ್ಯಾಂಟ್ರಿ ಕಾರ್ ಕೋಚ್, 2-ಲಗ್ಗೇಜ್ /ಬ್ರೇಕ್ ವ್ಯಾನ್ ಕೋಚ್ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net