ವೈದ್ಯಕೀಯ ವಿದ್ಯಾರ್ಥಿಗೆ ಬೆದರಿಸಿ 25 ಸಾವಿರ ರೂ. ಸುಲಿಗೆ

Threatening
Published on

ಮೈಸೂರು: ಬನ್ನಿಮಂಟಪದಲ್ಲಿ ಸೋಮವಾರ ವೈದ್ಯಕೀಯ ವಿದ್ಯಾರ್ಥಿಯೊಬ್ಬರನ್ನು ವ್ಯಕ್ತಿಗಳಿಬ್ಬರು ಬೆದರಿಸಿ 25 ಸಾವಿರ ರೂ. ಹಣ ಸುಲಿಗೆ ಮಾಡಿದ್ದಾರೆ.

ನಗರದ ಬನ್ನಿಮಂಟಪದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಆರ್ಯನ್ ಪಂಡಿತ್ ಹಣ ಕಳೆದುಕೊಂಡವರು. ಕಾಲೇಜಿಗೆ ತೆರಳುತ್ತಿದ್ದ ಸಂದರ್ಭ ಬನ್ನಿಮಂಟಪದ ಬಳಿ ಬೈಕಿನಲ್ಲ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ತಡೆದು ನಿಲ್ಲಿಸಿ ಬಲವಂತವಾಗಿ ಸಮೀಪದ ಪಾರ್ಕ್‌ಗೆ ಕರೆದೊಯ್ದು ‘ನೀನು ಡ್ರಗ್ಸ್ ಮಾರಾಟ ಮಾಡುತ್ತಿದ್ದಿಯಾ, ಸಹಪಾಠಿಗಳನ್ನು ಚುಡಾಯಿಸಿದ್ದಿಯಾ’ ಎಂದು ಬೆದರಿಸಿ ಗೂಗಲ್ ಪೇ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net