ಸುಲಿಗೆ ಪ್ರಕರಣ : ಮೂವರ ಬಂಧನ

udp-theft
Published on

ಮೈಸೂರು: ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಮೂವರು ಸುಲಿಗೆಕೋರರನ್ನು ಭಾನುವಾರ ಬಂಧಿಸಿ 24,850 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಮೋಟಾರ್ ಸೈಕಲ್, ಒಂದು ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ನಿವಾಸಿಗಳಾದ ಮುಹೀನ್, ಸುಹೇಲ್ ಬೇಗ್, ಮೊಹಮದ್ ಶೋಹೆಬ್ ಬಂಧಿತರು. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಹೋಟೆಲ್ ಬಳಿ ರಾತ್ರಿ ವೇಳೆ ಕಾರು ಚಾಲಕನಿಗೆ ಚಾಕು ತೋರಿಸಿ ಥಳಿಸಿ ಅವರ ಬಳಿ ಇದ್ದ 16 ಸಾವಿರ ನಗದು, ಎರಡು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.

ಆರೋಪಿಗಳ ಬಂಧನಕ್ಕೆ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಶೇಖರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಚಂದ್ರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net