ಅಳಿವಿನಂಚಿನಲ್ಲಿರುವ ಕಲೆಗಳ ಉಳಿವಿಕೆಗೆ ಪ್ರತಿಭಾ ಕಾರಂಜಿ ಸಹಕಾರಿ

26 Ylb 01
ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಶಿಕ್ಷಣ ಸಂಯೋಜಕ ಕನಕಪ್ಪ ಕಂಬಳಿ ಚಾಲನೆ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ಶಾಂತಪ್ಪ ಚಂಡೂರು, ಗ್ರಾಪಂ ಅಧ್ಯಕ್ಷ ಶರಣಪ್ಪ ಕುರಿ, ಸದಸ್ಯರಾದ ಶರಣಪ್ಪ ಹಾದಿಮನಿ, ಶರಣಕುಮಾರ್ ಅಮರಗಟ್ಟಿ, ಮಂಜುಳಾ ಚನ್ನಪ್ಪನಹಳ್ಳಿ, ಶರಣಪ್ಪ ಕರಡದ, ಹುಚ್ಚಮ್ಮ ಉಪ್ಪಾರ, ಶರಣಯ್ಯ ಬಂಡಿಹಾಳ ಇದ್ದರು.
Published on

ಯಲಬುರ್ಗಾ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಶಿಕ್ಷಣ ಸಂಯೋಜಕ ಕನಕಪ್ಪ ಕಂಬಳಿ ಹೇಳಿದರು.

ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ನೀಲಮ್ಮ ಶಿವಶಂಕರರಾವ ದೇಸಾಯಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಳಿವಿನಂಚಿನಲ್ಲಿರುವ ಜಾನಪದ ಕಲೆ, ಸಂಸ್ಕೃತಿ ಉಳಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಕಲಾ ಚಟುವಟಿಕೆಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಕೊರತೆ ಕಾರಣ ಅವಕಾಶಗಳು ಸಿಗುತ್ತಿರಲಿಲ್ಲ.

ಇದನ್ನು ಗಮನಿಸಿದ ಸರ್ಕಾರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಕಲೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿಯಂತಹ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು.

ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದರು. ಎಸ್ಡಿಎಂಸಿ ಅಧ್ಯಕ್ಷ ಶಾಂತಪ್ಪ ಚಂಡೂರು, ಗ್ರಾಪಂ ಅಧ್ಯಕ್ಷ ಶರಣಪ್ಪ ಕುರಿ, ಸದಸ್ಯರಾದ ಶರಣಪ್ಪ ಹಾದಿಮನಿ, ಶರಣಕುಮಾರ್ ಅಮರಗಟ್ಟಿ, ಮಂಜುಳಾ ಚನ್ನಪ್ಪನಹಳ್ಳಿ, ಶರಣಪ್ಪ ಕರಡದ, ಹುಚ್ಚಮ್ಮ ಉಪ್ಪಾರ, ಶರಣಯ್ಯ ಬಂಡಿಹಾಳ,

ಪ್ರಮುಖರಾದ ನಿಂಗಪ್ಪ ಮದ್ಗುಣ್ಕಿ, ಯಮನೂರ್‌ಸಾಬ್ ನಧಾಪ್, ಅಶೋಕ ಮಾಲಿಪಾಟೀಲ್, ಶರಣಯ್ಯ ಸರಗಣಚಾರ, ಎಸ್.ವಿ.ಧರಣಾ, ದೇವಪ್ಪ ಮುಗಳಿ, ನಾಗರಾಜ ನಡುಲಕೇರಿ, ಶರಣಪ್ಪ ರ್ಯಾವಣಕಿ, ಶಿವಪ್ಪ ಉಪ್ಪಾರ, ಸಿ.ಡಿ.ಹಳ್ಳಿ, ರಾಮಣ್ಣ ತಳವಾರ್, ಮುಖ್ಯಶಿಕ್ಷಕರಾದ ಸುರೇಶ ವೇದಪಾಠಕ, ಚಿನ್ನುಭಾಷ ಅತ್ತಾರ, ಪಿಡಿಒ ವೆಂಕಟೇಶ ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net