

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಶಿಕ್ಪಕಿಯರ ಸರ್ಕಾರಿ ತರಬೇತಿ ಸಂಸ್ಥೆ (ಟಿಸಿಡಬ್ಲೂ) ಪ್ರಸ್ತುತ 2024-25ನೇ ಸಾಲಿನ ಶೈಣಿಕ ವರ್ಷಕ್ಕೆ ಕನ್ನಡ, ಉರ್ದು ಹಾಗೂ ಇಂಗ್ಲಿಷ ಮಾಧ್ಯಮದ ಡಿಪ್ಲೋಮಾ ಇನ್ ಎಲೆಮೆಂಟರಿ ಎಜ್ಯುಕೇಷನ್ (ಡಿಇಎಲ್ಇಡಿ) ತರಬೇತಿ ಪ್ರವೇಶ ಅವಧಿಯನ್ನು ಜು. 31ರವರೆಗೆ ವಿಸ್ತರಿಸಿದೆ
ಹೆಣ್ಣು ಮಕ್ಕಳು ಮಾತ್ರ ಡಿಇಎಲ್ಇಡಿ ತರಬೇತಿ ಪಡೆಯಲು ಅವಕಾಶವಿದ್ದು, ಕಲಾ, ವಿಜ್ಞಾನ ಅಥವಾ ವಾಣಿಜ್ಯ ವಿಷಯದಲ್ಲಿ ಪಿಯುಸಿ ಪಾಸಾಗಿರಬೇಕು. ಸಾಮಾನ್ಯ ವರ್ಗದವರು ಶೇ.50 ಮತ್ತು ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1ರ ವಿದ್ಯಾಥಿರ್ಗಳು ಶೇ. 45 ಅಂಕ ಪಡೆದಿರಬೇಕು. ಪದವೀಧರ ವಿದ್ಯಾಥಿರ್ನಿಯರೂ ಪ್ರವೇಶ ಪಡೆಯಬಹುದು.
ಈ ತರಬೇತಿಯಿಂದ ಸರ್ಕಾರಿ ಇಲ್ಲವೇ ಖಾಸಗಿ ಶಾಲೆಗಳಲ್ಲಿ ಶಿಕ್ಷಕ ಹುದ್ದೆ ಲಭಿಸುತ್ತದೆ. ಈ ನಿಟ್ಟಿನಲ್ಲಿ ಟಿಇಟಿ ಮತ್ತು ಸಿಇಟಿ ತರಬೇತಿ, ಕಂಪ್ಯೂಟರ್ ತರಬೇತಿಗೆ ಉಚಿತ ಮಾರ್ಗದರ್ಶನ ಮಾಡಲಾಗುವುದು. ನುರಿತ ಸಿಬ್ಬಂದಿ ವರ್ಗದ ಜತೆಗೆ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಸೌಲಭ್ಯ ಹಾಗೂ ವಿದ್ಯಾರ್ಥಿ ವೇತನ ಸೌಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆ ಸಂಪಕಿರ್ಸಬಹುದು ಎಂದು ತರಬೇತಿ ಸಂಸ್ಥೆ ಪ್ರಾಚಾರ್ಯ ಬಿ.ಎಂ. ಬಡಿಗೇರ ತಿಳಿಸಿದ್ದಾರೆ.