ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

download
Published on

ಧಾರವಾಡ ಜಿಲ್ಲಾ ಶ್ರೀ ವಿಶ್ವಕರ್ಮ ಎಜುಕೇಷನಲ್ ಟ್ರಸ್ಟ್ ವತಿಯಿಂದ ವಿಶ್ವಕರ್ಮ ಸಮಾಜದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಅರ್ಜಿ ಸಲ್ಲಿಕೆ ಅವಽಯನ್ನು ಡಿ. 12ರವರೆಗೆ ವಿಸ್ತರಿಸಲಾಗಿದೆ. ಜಿಲ್ಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಹರು. 2023- 24ನೇ ಸಾಲಿನಲ್ಲಿ ಪ್ರಥಮ ಬಾರಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾಗಿ ವೃತ್ತಿಪರ ಕೋರ್ಸ್ಗಳಾದ ಪಾಲಿಟೆಕ್ನಿಕ್ (ಡಿಪ್ಲೋಮಾ/ ಸರ್ಟಿಫಿಕೇಟ್ ಕೋರ್ಸ್), ಎಂಬಿಬಿಎಸ್, ಆಯುರ್ವೇದಿಕ್ ಕೋರ್ಸ್, ಇಂಜಿನಿಯರಿ0ಗ್, ದಂತ ವಿಜ್ಞಾನ, ಎಂಬಿಎ, ಎಂಎಸ್.ಸಿ, ಎಂ.ಕಾ0 ಮತ್ತು ಇನ್ಫಾರ್ಮೇಷನ್ ಟೆಕ್ನಾಲಜಿ ಕೋರ್ಸ್ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು. ಆಸಕ್ತರು ವಿಳಾಸ ಹಾಗೂ ದೂರವಾಣಿ ಸಂಖ್ಯೆ ಮತ್ತು ಶೈಕ್ಷಣಿಕ ವಿವರವುಳ್ಳ ಅರ್ಜಿಯನ್ನು, ಜಾತಿ, ಆದಾಯ ಪ್ರಮಾಣಪತ್ರದೊಂದಿಗೆ ವಸಂತ ಎಂ. ಕಿಲ್ಲೇದ, ಪ್ರಧಾನ ಕಾರ್ಯದರ್ಶಿ, ಮನೆ ನಂ.: 93, ಕೆಎಚ್‌ಬಿ ಕಾಲನಿ, 5ನೇ ಕ್ರಾಸ್, ಸಾಧನಕೇರಿ, ಧಾರವಾಡ- 8 ಈ ವಿಳಾಸಕ್ಕೆ ಕಳುಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net