ನಾಲ್ವರು ಪುರಸಭೆ ಸದಸ್ಯರು, ಮೂವರು ಮುಖಂಡರ ಉಚ್ಚಾಟನೆ

Expulsion of four municipal councilors and three leaders
ಮಹಾಲಿಂಗಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು ಉಚ್ಚಾಟನೆ ಆದೇಶ ಪ್ರತಿ ಪ್ರದರ್ಶಿಸಿದರು. ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಸುರೇಶ ಅಕ್ಕಿವಾಟ, ಬಸನಗೌಡ ಪಾಟೀಲ, ಮಹಾಲಿಂಗಪ್ಪ ಕುಳ್ಳೋಳ್ಳಿ ಇದ್ದರು.
Published on

ಮಹಾಲಿಂಗಪುರ: ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಕುರಿತು ಅನವಶ್ಯಕವಾಗಿ ಬಹಿರಂಗ ಹೇಳಿಕೆ ನೀಡುವ ಮೂಲಕ ಪಕ್ಷದ ಶಿಸ್ತು ಉಲ್ಲಂಘನೆ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ನಾಲ್ವರು ಸದಸ್ಯರು ಮತ್ತು ಮೂವರು ಮುಖಂಡರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ ಎಂದು ತೇರದಾಳ ಕ್ಷೇತ್ರದ ಗ್ರಾಮೀಣ ಮಂಡಳದ ಅಧ್ಯಕ್ಷ ಸುರೇಶ ಅಕ್ಕಿವಾಟ ಹೇಳಿದರು.

ಪಟ್ಟಣದ ಜಿಎಲ್‌ಬಿಸಿ ಅತಿಥಿ ಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿತ್ತು. ನೋಟಿಸ್‌ಗೆ ಸಮಂಜಸ ಉತ್ತರ ನೀಡದಿರುವುದು ಹಾಗೂ ಅವರ ಮೇಲಿನ ಪಕ್ಷ ವಿರೋಧಿ ಚಟುವಟಿಕೆ ಸಾಬೀತಾಗಿರುವುದರಿಂದ ಪುರಸಭೆ ಬಿಜೆಪಿ ಸದಸ್ಯರಾದ ರವಿ ಜವಳಗಿ, ಪ್ರಹ್ಲಾದ್ ಸಣ್ಣಕ್ಕಿ, ಬಸವರಾಜ ಹಿಟ್ಟಿನಮಠ, ಬಸವರಾಜ ಚಮಕೇರಿ ಹಾಗೂ ಮುಖಂಡರಾದ ಮಹಾಲಿಂಗಪ್ಪ ಮುದ್ದಾಪೂರ, ಚನ್ನಪ್ಪ ರಾಮೋಜಿ, ಶಿವಾನಂದ ಹುಣಶ್ಯಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದರು.

ಬಿಜೆಪಿ ನಾಯಕ ಬಸನಗೌಡ ಪಾಟೀಲ ಮಾತನಾಡಿ, ಪುರಸಭೆ ಸದಸ್ಯರ ಜತೆಯಲ್ಲಿ ಸ್ಪರ್ಧಿಸುವ ಕುರಿತು ವಿಚಾರಿಸಲಾಗಿತ್ತು. ಅವರಿಂದ ಸ್ಪರ್ಧಿಸುವ ಆಸಕ್ತಿ ಕಂಡುಬರಲಿಲ್ಲ. ಪಕ್ಷೇತರ ಸದಸ್ಯನ ಬೆಂಬಲ ಇಲ್ಲದ್ದಕ್ಕೆ ನಮಗೆ ಬಹುಮತ ಇರಲಿಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧಿಸಲಿಲ್ಲ. ಚುನಾವಣೆಗೆ ಸ್ಪರ್ಧಿಸುವ ಹಂಬಲವಿದ್ದರೆ ತಿಳಿಸಬಹುದಿತ್ತು. ಏನೇ ತಪ್ಪು, ತಡೆ ಇದ್ದರೆ ಪಕ್ಷದೊಳಗೆ ಚರ್ಚಿಸದೆ ಮಾಧ್ಯಮಗಳಿಗೆ ಹೇಳಿಕೆ ನೀಡುವ ಅಗತ್ಯ ಏನಿತ್ತು ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಂಕರ ಹುನ್ನೂರ, ನಗರ ಘಟಕ ಅಧ್ಯಕ್ಷ ಮಹಾಲಿಂಗಪ್ಪ ಕುಳ್ಳೋಳ್ಳಿ, ಬಿಜೆಪಿ ಮುಖಂಡರಾದ ಆನಂದ ಕಂಪು, ಶೇಖರ ಅಂಗಡಿ, ಅಶೋಕಗೌಡ ಪಾಟೀಲ, ಶಿವಲಿಂಗ ಘಂಟಿ, ಜಿ.ಎಸ್. ಗೊಂಬಿ, ಬಕ್ಷಿಸಾಬ ಯಾದವಾಡ, ಈರಪ್ಪ ದಿನ್ನಿಮನಿ, ಶಿವಾನಂದ ಅಂಗಡಿ, ಭೀಮಶಿ ಗೌಂಡಿ, ವಿಷ್ಣುಗೌಡ ಪಾಟೀಲ, ಅನೀಲ ಮಮದಾಪೂರ, ಶಿವನಗೌಡ ಪಾಟೀಲ, ವಿರೇಶ ಮುಂಡಗನೂರ, ಶಿವಬಸು ಗೌಂಡಿ, ಅರ್ಜುನ ಮೋಪಗಾರ, ಮಲ್ಲಪ್ಪ ಯರಡ್ಡಿ, ಬಸವರಾಜ ಹುಕ್ಕೇರಿ, ಸಂಗಪ್ಪ ಡೋಣಿ, ಮಹೇಶ ಜಿಡ್ಡಿಮನಿ, ಮಹಾಂತೇಶ ಪಾತ್ರೋಟ, ತಿಪ್ಪಣ್ಣ ಬಂಡಿವಡ್ಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net