ಅಭಿವ್ಯಕ್ತ ಬುದ್ಧಿವಂತಿಕೆ ಮಕ್ಕಳಿಗೆ ಅವಶ್ಯ

nes
ಕಸ್ತೂರಬಾ ಪ್ರೌಢಶಾಲೆ ವಿದ್ಯಾರ್ಥಿನಿ ಸಂಘವನ್ನು ಡಾ. ಸಂಧ್ಯಾ ಕಾವೇರಿ ಉದ್ಘಾಟಿಸಿದರು. ಜಿ.ಎಸ್.ನಾರಾಯಣ ರಾವ್, ಎಸ್.ಆರ್.ವೆಂಕಟೇಶ್, ಕೆ.ಆರ್.ಉಮೇಶ್, ಮದೀಹಾ, ಎಸ್.ಕಾವ್ಯಾ ಇತರರಿದ್ದರು.
Published on

ಶಿವಮೊಗ್ಗ: ಭಾವನೆಗಳನ್ನು ಗುರುತಿಸುವ ಮತ್ತು ಸೌಜನ್ಯಯುತವಾಗಿ ಅಭಿವ್ಯಕ್ತಗೊಳಿಸುವ ಬುದ್ಧಿವಂತಿಕೆ ಮಕ್ಕಳಿಗೆ ಅಗತ್ಯವಿದೆ ಎಂದು ಕಟೀಲ್ ಅಶೋಕ್ ಪೈ ಕಾಲೇಜಿನ ಪ್ರಾಚಾರ್ಯೆ ಡಾ. ಸಂಧ್ಯಾ ಕಾವೇರಿ ಅಭಿಪ್ರಾಯಪಟ್ಟರು.ಅಭಿವ್ಯಕ್ತ ಬುದ್ಧಿವಂತಿಕೆ ಮಕ್ಕಳಿಗೆ ಅವಶ್ಯ

ಕುವೆಂಪು ರಂಗಮಂದಿರದಲ್ಲಿ ಕಸ್ತೂರಬಾ ಬಾಲಿಕಾ ಪ್ರೌಢಶಾಲೆಯಿಂದ ಏರ್ಪಡಿಸಿದ್ದ ವಿದ್ಯಾರ್ಥಿನಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಅಭಿವ್ಯಕ್ತಗೊಳಿಸುವ ರೀತಿ ಉತ್ತಮವಾಗಲು ಪಾಲಕರು ಅಂತಹ ಭಾವನೆಗಳಿಗೆ ಸ್ಪಂದಿಸಬೇಕಿದೆ. ಮಕ್ಕಳು ಹಾಗೂ ಪಾಲಕರಲ್ಲಿ ಭಾವನಾತ್ಮಕ ಹಾಗೂ ಸಾಮಾಜಿಕ ಬುದ್ಧಿವಂತಿಕೆ ಅಗತ್ಯ ಎಂದು ತಿಳಿಸಿದರು.
ಇಂದು ಸಾಧನೆಯ ಯುಗದಲ್ಲಿ ನಾವಿದ್ದೇವೆ. ಯುವ ಸಮೂಹ ತಮ್ಮಲ್ಲಿರುವ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳುವ ವೇದಿಕೆಯ ತುಡಿತದಲ್ಲಿದೆ. ಬುದ್ಧಿವಂತಿಕೆ ಮತ್ತು ಕೌಶಲ ಯಾವುದೇ ಔಷಧಗಳಿಂದ ಸಿಗುವುದಿಲ್ಲ. ನಮ್ಮಲ್ಲಿರುವ ಸ್ವಯಂ ಪ್ರೇರಣೆ, ಏಕಾಗ್ರತೆ ಮತ್ತು ಕ್ರಿಯಾಶೀಲತೆಯಿಂದ ಯೋಚನಾ ಶಕ್ತಿ ಸದೃಢಗೊಳ್ಳುತ್ತದೆ ಎಂದರು.
ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣ ಕಲಿಕೆಯಲ್ಲಿ ವಿದ್ಯಾರ್ಥಿ ಸಂಘಗಳಂತಹ ಕ್ರಿಯಾಶೀಲ ಚಟುವಟಿಕೆಗಳು ಅತ್ಯವಶ್ಯ. ಮಕ್ಕಳಲ್ಲಿ ನಾಯಕತ್ವದ ಗುಣ ಹಾಗೂ ಸಮಾಜದಲ್ಲಿ ಪ್ರಬುದ್ಧ ವರ್ತನೆಗಳನ್ನು ಕಲಿಸಿಕೊಡುತ್ತದೆ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಕಸ್ತೂರಬಾ ಪ್ರೌಢಶಾಲೆ ಉಪಪ್ರಾಚಾರ್ಯ ಕೆ.ಆರ್.ಉಮೇಶ್, ಪಿಯು ಕಾಲೇಜಿನ ಪ್ರಾಚಾರ್ಯ ಎಸ್.ಆರ್.ವೆಂಕಟೇಶ್, ವಿದ್ಯಾರ್ಥಿನಿ ಸಂಘದ ಪ್ರಧಾನಿ ಮದೀಹಾ, ಪ್ರತಿಪಕ್ಷ ನಾಯಕಿ ಎಸ್.ಕಾವ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net