

ಕಾರವಾರ: ಕರ್ನಾಟಕ ಮೆರಿಟೈಮ್ ಬೋರ್ಡ್ ರಚನೆಯಾದರೆ ಬಂದರು ಚಟುವಟಿಕೆಗಳು ಚುರುಕುಗೊಳ್ಳುತ್ತವೆ ಎಂಬ ನಿರೀಕ್ಷೆ ಹುಸಿಯಾಗಿದೆ. ಮೆರಿಟೈಮ್ ಬೋರ್ಡ್ ಹೊಸ ಖಾಸಗಿ ಬಂದರುಗಳ ನಿರ್ಮಾಣಕ್ಕೆ ಹೆಚ್ಚು ಆಸಕ್ತಿ ತೋರುತ್ತಿದೆಯೇ ಹೊರತು. ಇದ್ದ ಬಂದರುಗಳ ಆದಾಯ ವೃದ್ಧಿಗೆ ಗಮನ ಹರಿಸುತ್ತಿಲ್ಲ. ಇದರಿಂದ ಕಾರವಾರ ವಾಣಿಜ್ಯ ಬಂದರಿನ ಆದಾಯ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕುಸಿಯುತ್ತಿದೆ. ಬಂದರಿನ ನೀತಿ ಹಾಗೂ ಸುಂಕ ಹೆಚ್ಚಳ ಮುಂತಾದ ಕಾರಣಗಳಿಗೆ ಕಾರವಾರದಲ್ಲಿ ರಫ್ತು ಚಟುವಟಿಕೆಗಳು ಬಂದ್ ಆಗಿದೆ. ಸ್ಥಳೀಯ ಸೀಬರ್ಡ್ ನೌಕಾನೆಲೆಗೆ ಎಚ್‌ಎಸ್‌ಡಿ (ಡೀಸೆಲ್) ಹಾಗೂ ಬಿಣಗಾದ ಗ್ರಾಸಿಂ ಇಡಸ್ಟ್ರೀಸ್ ಬರುವ ರಾಕ್ ಸಾಲ್ಟ್ ಮಾತ್ರ ಕಾರವಾರ ಬಂದರಿನ ದೊಡ್ಡ ಆದಾಯದ ಮೂಲಗಳಾಗಿವೆ. ರಾಜ್ಯದ ಇತರ ಯಾವುದೇ ಉದ್ಯಮಗಳು ಕಾರವಾರ ಬಂದರಿನ ಮೂಲಕ ವಹಿವಾಟನ್ನು ನಿಲ್ಲಿಸಿವೆ. ಬಂದರು ಇಲಾಖೆಯ ಅಡಿ ಕಾರವಾರ ಹಾಗೂ ಮಂಗಳೂರು ಬಂದರುಗಳಿದ್ದವು. ಇಲಾಖೆಯಿಂದ ತ್ವರಿತ ಕಾರ್ಯ ನಿರ್ವಹಣೆ ಸಾಧ್ಯವಿಲ್ಲ. ಇದರಿಂದ ರಾಜ್ಯದಲ್ಲಿ ಬಂದರು ಚಟುವಟಿಕೆ ನಿರೀಕ್ಷೆಯಷ್ಟು ಅಭಿವೃದ್ಧಿ ಕಂಡಿಲ್ಲ. ಜಲಸಾರಿಗೆ ಮಂಡಳಿ ಸ್ಥಾಪನೆ ಮಾಡಿದರೆ ಬಂದರು ಅಭಿವೃದ್ಧಿ ಕಾರ್ಯಗಳು ಬೇಗನೇ ಆಗಲಿವೆ ಎಂದು ಯೋಜಿಸಿ 2015 ರಲ್ಲಿ ಕರ್ನಾಟಕ ಮೆರಿಟೈಮ್ ಬೋರ್ಡ್ ಬಿಲ್‌ನ್ನು 2017 ರಲ್ಲಿ ಪ್ರಕಟಿಸಲಾಯಿತು. 2018 ರಿಂದ ಕಾರವಾರದಲ್ಲಿ ಕೇಂದ್ರ ಕಚೇರಿಯಾಗಿಸಿಕೊಂಡು ಕರ್ನಾಟಕ ಮೆರಿಟೈಮ್ ಬೋರ್ಡ್ ಕಾರ್ಯ ನಿರ್ವಹಿಸುತ್ತಿದೆ. ಅದರಡಿ ಕಾರವಾರ ಹಾಗೂ ಮಂಗಳೂರು ಬಂದರುಗಳನ್ನು ನೀಡಲಾಗಿದೆ.
ಮೊಲೈಸಿಸ್ ಮೇಲಿನ ಆಮದು ಸುಂಕವನ್ನು ಹೆಚ್ಚಳ ಮಾಡಿದ್ದು, ಕಾರವಾರ ಬಂದರಿನ ಆದಾಯದ ಮೇಲೆ ದೊಡ್ಡ ಹೊಡೆದ ಬಂದಿದೆ. ಇದರಿಂದ ಮೊಲೈಸಿಸ್ ರಫ್ತು ನಿಂತಿದೆ. ಕ್ಯಾ.ಸಿ.ಸ್ವಾಮಿ ಬಂದರು ಇಲಾಖೆ ನಿರ್ದೇಶಕ