

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ರಫ್ತುದಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಇದೇ ಮೊದಲ ಬಾರಿಗೆ ರಫ್ತು ಶ್ರೇಷ್ಠತಾ ಪ್ರಶಸ್ತಿ ನೀಡಲು ಮುಂದಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಸೆ. 9ರಂದು ಸಂಜೆ 5 ಗಂಟೆಗೆ ಸಂಸ್ಥೆಯ ಸಭಾಭವನದಲ್ಲಿ ನಡೆಯಲಿದೆ.
ಸ್ಟಾರ್ ರಫ್ತುದಾರರು ವಿಭಾಗದಲ್ಲಿ ಹುಬ್ಬಳ್ಳಿಯ ತಿಲಕ ವಿಕಂಸಿ, ಬೆಳಗಾವಿಯ ಸುನೀಶ ಮೇತ್ರಾಣಿ, ಬಾಲಚಂದ್ರ ಬದನ್, ಗದಗನ ಬಿ. ಸಾಯಿಕುಮಾರ, ಮರ್ಚಂಟ್ ರಫ್ತುದಾರರ ವಿಭಾಗದಲ್ಲಿ ಹುಬ್ಬಳ್ಳಿಯ ಶಾಂತಿಲಾಲ ಓಸ್ವಾಲ್, ಉದಯೋನ್ಮುಖ ರಫ್ತುದಾರರ ವಿಭಾಗದಲ್ಲಿ ಹುಬ್ಬಳ್ಳಿಯ ಪ್ರಕಾಶ ಜೈನ್, ರಾಣೆಬೆನ್ನೂರಿನ ಕೆ. ವೈ. ಜಾಡರ, ಇಳಕಲ್ನ ಕಮಲಪ್ಪ ಜಾಲಿಹಾಳ, ಹುಬ್ಬಳ್ಳಿಯ ಪ್ರಸಾದ ಪಾಟೀಲ ಹಾಗೂ ಮಹಿಳಾ ವಿಭಾಗದಲ್ಲಿ ಅನುಪಮಾ ಹಿರೇಮಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ತಿಳಿಸಿದ್ದಾರೆ.