ಬೋಳಾಸ್ ಆಗ್ರೋ ಸಂಸ್ಥೆಗೆ ರಾಜ್ಯ ರಫ್ತು ಶ್ರೇಷ್ಠ ಪ್ರಶಸ್ತಿ

mng-2aug-bolas
Published on

ಮಂಗಳೂರು : ಡ್ರೈ ಫ್ರುಟ್ಸ್ ಅಂಡ್ ನಟ್ಸ್ ಉತ್ಪಾದಕ ಸಂಸ್ಥೆಯಾದ ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಉಡುಪಿ ಜಿಲ್ಲೆಗಾಗಿ ಪ್ರತಿಷ್ಠಿತ ರಾಜ್ಯ ರಫ್ತು ಶ್ರೇಷ್ಠ ಪ್ರಶಸ್ತಿ 2021 ಗಳಿಸುವ ಮೂಲಕ ಗಮನಾರ್ಹ ಮೈಲಿಗಲ್ಲು ಸಾಧಿಸಿದೆ.
ಬೆಂಗಳೂರಿನ ವಿಧಾನಸೌಧದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ರಫ್ತು ಶ್ರೇಷ್ಠತಾ ಪ್ರಶಸ್ತಿ ಸಮಿತಿಯು ಆಯೋಜಿಸಿದ್ದ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಬೋಳಾಸ ಕಂಪನಿಗೆ ನೀಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ರಜತ್ ಕಾಮತ್ ಬೋಳಾ ಮತ್ತು ಅಂಜನಿ ಕಾಮತ್ ಪ್ರಶಸ್ತಿ ಸ್ವೀಕರಿಸಿದರು.
ರಫ್ತು ಕ್ಷೇತ್ರದಲ್ಲಿ ಬೋಳಾಸ್ ಆಗ್ರೋನ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ ನೀಡಲಾದ ಪ್ರತಿಷ್ಠಿತ ಗೌರವವನ್ನು ಸ್ವೀಕರಿಸಲು ಸಂತಸವಾಗುತ್ತಿದೆ .ಈ ಮನ್ನಣೆಯು ರಫ್ತು ವಲಯದಲ್ಲಿ ಪ್ರಮುಖ ಬ್ರಾೃಂಡ್ ಆಗಿ ಸಂಸ್ಥೆ ಸ್ಥಾನಕ್ಕೆ ಸಂದ ಗೌರವವಾಗಿದೆ. ಉದ್ಯಮದಲ್ಲಿ ಉನ್ನತ ಗುಣಮಟ್ಟದ ಸೇವೆಯನ್ನು ಮುಂದುವರಿಸುತ್ತೇವೆ .ವಿಶ್ವದಾದ್ಯಂತ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಲುಪಿಸುತ್ತೇವೆ.
ಈ ಗುರುತಿಸುವಿಕೆ ಹೊಸ ಹಾದಿಗಳನ್ನು ಅನ್ವೇಷಿಸಲು ಮತ್ತು ರಫ್ತು ಪ್ರಪಂಚಕ್ಕೆ ಮತ್ತಷ್ಟು ಕೊಡುಗೆ ನೀಡಲು ನಮ್ಮ ಉತ್ಸಾಹವನ್ನು ಉತ್ತೇಜಿಸುತ್ತದೆ. ನಮ್ಮ ಪ್ರಯಾಣದ ಭಾಗವಾಗಿರುವ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸುತ್ತೇವೆ ಎಂದು ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಬೋಳಾ ರಜತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net