

ಗಂಗಾವತಿ: ಶೈಕ್ಷಣಿಕ ಸಾಧನೆ ಮೂಲಕ ಸಮ ಸಮಾಜ ನಿರ್ಮಾಣ ಸಾಧ್ಯ, ಶೋಷಿತ ವರ್ಗಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ಮಕ್ಕಳ ತಜ್ಞ ಮತ್ತು ಲಯನ್ಸ್ ಕ್ಲಬ್ ತಾಲೂಕಾಧ್ಯಕ್ಷ ಡಾ.ಕೆ.ಅಮರೇಶ ಪಾಟೀಲ್ ಹೇಳಿದರು.
ನಗರದ ನೀಲಕಂಠೇಶ್ವರ ವೃತ್ತದ ಬಳಿ ಶ್ರೀ ಕೃಷ್ಣ ಸಭಾಂಗಣದಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿಯಿಂದ ಇತ್ತಿಚಿಗೆ ನಡೆದ ಅಹಿಂದ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಶಿಕ್ಷಣ ಪಡೆಯುವ ಮೂಲಕ ಹಕ್ಕುಗಳನ್ನು ಪಡೆದುಕೊಳ್ಳಬೇಕಿದ್ದು, ಶಿಕ್ಷಣ ಸಾಧಕ ದೇಶದ ಬಹುದೊಡ್ಡ ಆಸ್ತಿ.
ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದವರು ಸರ್ಕಾರದ ಸೌಲಭ್ಯಗಳ ಮೂಲಕ ಅಭಿವೃದ್ಧಿ ಮುಖ್ಯವಾಹಿನಿಗೆ ಬರುವಂತೆ ಸಲಹೆ ನೀಡಿದರು. ತಾಪಂ ಮಾಜಿ ಅಧ್ಯಕ್ಷ ಶರಣೇಗೌಡ ಪೊ.ಪಾಟೀಲ್,
ನಗರಸಭೆ ಮಾಜಿ ಸದಸ್ಯ ಶಾಮೀದ್ ಮನಿಯಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶರಣಪ್ಪ ನಾಯಕ್, ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸುಭಾಸ್, ಕಾರ್ಯಾಧ್ಯಕ್ಷ ಗಂಗಣ್ಣ,
ಮುಖಂಡರಾದ ಶಂಕರ ಸಿದ್ದಾಪುರ, ಶಿವಪ್ಪ ಮಾದಿಗ, ಶಿವಣ್ಣ ಈಳಿಗೆನೂರು, ಹನುಮಂತಪ್ಪ ಡಗ್ಗಿ, ಮಲ್ಲೇಶ ದೇವರಮನಿ, ಮೂರ್ತಿ, ಮೌನೇಶ ಸಂಗಾಪುರ, ದೇವಣ್ಣ ಜಂತಕಲ್, ಅರಷಿಣಕೇರಿ ಹನುಮಂತಪ್ಪ, ದೀಪಕ್ ಬಾಂಠಿಯಾ, ಪತ್ರಕರ್ತ ಕೆ.ನಿಂಗಣ್ಣ ಇದ್ದರು.