ಸ್ಪೋಟಕ ತಿಂದು ಹಸು ಬಾಯಿ ಛಿದ್ರ

12-kolllegal-1,,,,, crime
Published on

ಕೊಳ್ಳೇಗಾಲ : ತಾಲೂಕಿನ ಶಿವನಸಮುದ್ರ ಗ್ರಾಮದ ಬಳಿ ಹಂದಿ ಬೇಟೆಗಾಗಿ ಇಟ್ಟಿದ್ದ ಸ್ಪೋಟಕವನ್ನು ಭಾನುವಾರ ಹಸುವೊಂದು ತಿಂದು ಅದರ ಬಾಯಿ ಸ್ಪೋಟಗೊಂದು ಛಿದ್ರ ಛಿದ್ರವಾಗಿದೆ. ಶಿವನಸಮುದ್ರದ ಶಿವು ಎಂಬುವರಿಗೆ ಸೇರಿದ ಹಸು ಇದಗಾಗಿದೆ. ಹಂದಿಗಳ ಕಾಟ ಹೆಚ್ಚಿರುವುದರಿಂದ ಅವುಗಳ ಬೇಟೆಗಾಗಿ ಮೇವಿನ ಒಳಗೆ ಕಿಡಿ ಗೇಡಿಗಳು ಸ್ಪೋಟಕವನ್ನು ಅಡಗಿಸಿಟ್ಟಿದ್ದರು. ಎಂದಿನಂತೆ ಮೇವು ಅರಸಿ ಬಂದ ಹಸು ಸ್ಪೋಟಕವನ್ನು ಅಡಗಿಸಿಟ್ಟಿದ್ದ ಮೇವು ತಿಂದಿದೆ. ಈ ವೇಳೆ ಅದರ ಬಾಯಿ ಗಾಯಗೊಂಡಿದೆ.ಕಿಡಿಗೇಡಿಗಳ ಕೃತ್ಯಕ್ಕೆ ಮೂಕ ಜೀವಿಗಳು ನರಳುತ್ತಿವೆ. ಸ್ಪೋಟಕ ಇಟ್ಟವನನ್ನು ಪತ್ತೆಹಚ್ಚಿ ಬಂಧಿಸುವಂತೆ ಹಸು ಮಾಲೀಕ ಶಿವು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net