ಶ್ರೀ ಶಂಕರರ ಸ್ತೋತ್ರಗಳ ತಾತ್ಪರ್ಯ ವಿವರಣೆ

In the Bhuvanagiri temple of Siddapur taluk V. Ananthamurthy Bhatta gave a lecture.
Published on

ಸಿದ್ದಾಪುರ: ತಾಲೂಕಿನ ಭುವನಗಿರಿಯ ಭುವನೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಸುಷಿರ ಸಂಗೀತ ಪರಿವಾರ ಕಲ್ಲಾರೆಮನೆ ಮತ್ತು ಭುವನೇಶ್ವರಿ ದೇವಾಲಯ ಭುವನಗಿರಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಮಾತಾ ವೈಭವಂ ಕಾರ್ಯಕ್ರಮದಲ್ಲಿ ವಿ. ಅನಂತಮೂರ್ತಿ ಭಟ್ಟ ಯಲುಗಾರ ಅವರು ಶ್ರೀ ಶಂಕರರ ಸ್ತೋತ್ರಗಳಲ್ಲಿ ಶ್ರೀಮಾತೆ ವಿಷಯ ಕುರಿತು ಉಪನ್ಯಾಸ ನೀಡಿದರು.

ಇಚ್ಛಾ ಶಕ್ತಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿ ಸ್ವರೂಪಿಯಾಗಿ ಶಂಕರರು ಮಾತೆಯನ್ನು ಕಂಡು ಸ್ತುತಿಸಿದ ಸ್ತೋತ್ರಗಳ ತಾತ್ಪರ್ಯವನ್ನು ವಿವರಿಸಿದರು.

ಶಂಕರಮಠದ ಧರ್ವರಿಕಾರಿ ವಿಜಯ ಹೆಗಡೆ ದೊಡ್ಮನೆ ದಂಪತಿ, ಸುಷಿರ ಸಂಗೀತ ಪರಿವಾರದ ನಾರಾಯಣ ಹೆಗಡೆ ಕಲ್ಲಾರೆಮನೆ ಇದ್ದರು.

ಗಣಪತಿ ಹೆಗಡೆ ಸ್ವಾಗತಿಸಿದರು. ಶ್ರೀಕಾಂತ ಹೆಗಡೆ ವಂದಿಸಿದರು. ಗಣಪತಿ ಹೆಗಡೆ ಗುಂಜಗೋಡ ದಂಪತಿ ವಿ. ಅನಂತಮೂರ್ತಿ ಭಟ್ಟ ಅವರನ್ನು ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net