ಜನರಿಗೆ ಗ್ಯಾರಂಟಿ ಯೋಜನೆಯ ಮಹತ್ವ ತಿಳಿಸಿ; ವಿನಯಕುಮಾರ ಸೊರಕೆ

sorake meeting congress office
ವಿಜಯಪುರ ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಮಾತನಾಡಿದರು. ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಸ್.ಲೋಣಿ, ಮುನೀರ್ ಅಹ್ಮದ್, ಶರಣಪ್ಪ ಕೊಟಗಿ, ಎಸ್.ಜಿ. ಮಹಾಬಳೇಶ್ವರ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಐದು ಗ್ಯಾರಂಟಿ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಅಲ್ಲದೇ ಬಿಜೆಪಿಯ ಸುಳ್ಳು ಭರವಸೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಪಕ್ಷದ ಪದಾಧಿಕಾರಿಗಳಿಗೆ ತಿಳಿಸಿದರು.

ನಗರದ ಕಾಂಗ್ರೆಸ್ ಕಾರ್ಯಲಯದಲ್ಲಿ ಗುರುವಾರ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮತ್ತು ಪ್ರಚಾರ ಸಮಿತಿಯ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಿ ಮಾತನಾಡಿದ ಅವರು, ಕಾಂಗ್ರೆಸ್‌ನ ತತ್ವ ಸಿದ್ದಾಂತಗಳು ಜನರಿಗೆ ತಿಳಿಸಿಕೊಡಬೇಕು. ಕಾಂಗ್ರೆಸ್‌ನ ಬಡವರ ಪರವಾದ ಯೋಜನೆಗಳು ಕುರಿತು ಜಾಗೃತಿ ಮೂಡಿಸಬೇಕೆಂದರು.

ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಸ್.ಲೋಣಿ ಮಾತನಾಡಿ, ಕಾಂಗ್ರೆಸ್ ಪಕ್ಷ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಬಡವರಿಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ. ಈ ಬಗ್ಗೆ ಜನರಿಗೆ ಮನದಟ್ಟು ಮಾಡಬೇಕೆಂದರು.

ಉಪಾಧ್ಯಕ್ಷ ಮುನೀರ್ ಅಹ್ಮದ್, ಮುಖ್ಯ ಸಂಘಟಕ ಶರಣಪ್ಪ ಕೊಟಗಿ, ಎಸ್.ಜಿ. ಮಹಾಬಳೇಶ್ವರ, ಸರಫರಾಜ ಮಿರ್ದೆ ಮಾತನಾಡಿದರು. ಮಹ್ಮದ್ ರಫೀಕ್ ಟಪಾಲ್, ಪಿ.ಕೆ. ನೀರಲಕಟ್ಟಿ, ವಸಂತ ಹೊನಮೋಡೆ, ಸುಭಾಸ ಕಾಲೇಬಾಗ, ರಾಮಚಂದ್ರ ಹಕ್ಕೆ, ಸಿದ್ದಣ್ಣ ಗೌಡಣ್ಣವರ, ಆರತಿ ಶಾಹಪೂರ, ಭಾರತಿ ನಾವಿ, ಮಂಜುಳಾ ಗಾಯಕವಾಡ, ರೇಣುಕಾ ವಾಲಿಕಾರ, ಕಾಶಿಬಾಯಿ ಹಡಪದ, ನೀತಾ ಕಾಳೆ, ಶಿಲ್ಪಾ ಮೇತ್ರಿ, ರೂಪಾ ಬಿರಾದಾರ, ಸುನಿಲ ಹೊಸಳ್ಳಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net