

ಕೆಜಿಎಫ್- ಅವಧಿ ಮೀರಿದ ಔಷಧಗಳು, ಸಿಬ್ಬಂದಿ ಕೊರತೆ, ಶಸ್ತ್ರ ಚಿಕಿತ್ಸಕರ ಕೊರತೆ, ಫಿಜಿಶಿಯನ್ ಕೊರತೆ, ನಿರ್ವಹಣೆಯಿಲ್ಲದ ಶೌಚಗೃಹಗಳು, ರೋಗಿಗಳಿಗೆ ಖಾಸಗಿ ಮೆಡಿಕಲ್ ಶಾಪ್ಗೆ ಚೀಟಿ ಬರೆದು ಕಳಿಸುವುದೂ ಸೇರಿ ಹತ್ತು ಹಲವು ಸಮಸ್ಯೆಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಉಪಲೋಕಾಯುಕ್ತ ನ್ಯಾಯಾಧೀಶ ಬಿ.ವೀರಪ್ಪ ಅವರಿಗೆ ಕಂಡುಬಂದಿತು.
ನಗರದ ಸಾರ್ವಜನಿಕ ಆಸ್ಪತ್ರೆಗೆ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಸೋಮವಾರ ಭೇಟಿ ನೀಡಿದ ನ್ಯಾಯಾಧೀಶರು ನೇರವಾಗಿ ಔಷಧಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹಲವು ಔಷಧಗಳು ಅವಧಿ ಮೀರಿದ್ದು, ರೋಗಿಗಳಿಗೆ ನೀಡಲು ದಾಸ್ತಾನು ಮಾಡಿದ್ದನ್ನು ಕಂಡು ಕೆಂಡಾಮಂಡಲವಾದರು. ಸಾರ್ವಜನಿಕರ ಜೀವದ ಜತೆ ಚೆಲ್ಲಾಟವಾಡುತ್ತಿದ್ದೀರಾ? ಎಂದು ವೈದ್ಯರನ್ನು ಪ್ರಶ್ನಿಸಿದರು.
ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುವ ರೋಗಿಗಳಿಗೆ ಔಷಧ ನೀಡದೆ ಹೊರಗಡೆ ಚೀಟಿ ಬರೆದು ಕಳುಹಿಸುತ್ತಿರುವದರ ಬಗ್ಗೆ ಸಾರ್ವಜನಿಕರು ಸ್ಥಳದಲ್ಲೇ ದೂರು ನೀಡಿದರು. ಈ ಕುರಿತು ಹಾಜರಿದ್ದ ವೈದ್ಯರು ಮತ್ತು ಅಧಿಕಾರಿಗಳಿಗೆ ಔಷಧಗಳನ್ನು ತೆಗೆದು ಹಾಕಲು ಸೂಚಿಸಿದರು. ತಾಲೂಕಿನ ಪ್ರತಿ ಸರ್ಕಾರಿ ಕಚೇರಿಯ ಮುಂಭಾಗ ಕೋಲಾರ ಹಾಗೂ ಬೆಂಗಳೂರಿನ ಲೋಕಾಯುಕ್ತ ಕಚೇರಿ ಮತ್ತು ಅಧಿಕಾರಿಗಳ ದೂರವಾಣಿ ಸಂಖ್ಯೆಯ ನಾಮಲಕ ಅಳವಡಿಸಬೇಕೆಂದು ತಿಳಿಸಿದರು. ಸಾರ್ವಜನಿಕರ ಕೆಲಸವನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ಮಾಡಿಕೊಡಬೇಕು. ಒಂದು ವೇಳೆ ಸರ್ಕಾರಿ ಕೆಲಸ ಮಾಡಿಕೊಡಲು ಅಧಿಕಾರಿಗಳು ಮತ್ತು ಸಿಬ್ಬಂದಿ ಯಾರಾದರೂ ಹಣ ಕೇಳಿದರೇ ಕೂಡಲೇ ಲೋಕಾಯುಕ್ತರಿಗೆ ದೂರವಾಣಿ ಮೂಲಕ ನಿಮ್ಮ ವಿಳಾಸ ಹಾಗೂ ದೂರು ನೀಡಬೇಕು ಎಂದು ತಿಳಿಸಿದರು.
ಬ್ಯಾಂಕ್ ಸ್ಟೇಟ್ಮೆಂಟ್ ನೀಡಲು ತಾಕೀತು:
ನಂತರ ನಗರಸಭೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಬ್ಬಂದಿ ಮೊಬೈಲ್ ೋನ್ ತಮ್ಮ ಸಂಬಳಕ್ಕಿಂತ ಹೆಚ್ಚು ಹಣದ ವರ್ಗಾವಣೆ ಹಿನ್ನಲೆ ೋನ್ಪೇ, ಗೂಗಲ್ಪೇ ಹಾಗೂ ಒಂದು ವರ್ಷದ ಬ್ಯಾಂಕ್ ಸ್ಟೇಟ್ಮೆಂಟ್ ವಿವರ ಲೋಕಾಯುಕ್ತ ಕಚೇರಿಗೆ ತಲುಪಿಸುವಂತೆ ಪೌರಾಯುಕ್ತರಿಗೆ ಆದೇಶ ನೀಡಿದರು. ಕಚೇರಿಯಲ್ಲಿ ಅಧಿಕಾರಿಗಳು ತಮ್ಮ ಬಳಿ ಇರುವ ಹಣವನ್ನು ಇನ್ವಾರ್ಡ್ ಮತ್ತು ಔಟ್ವಾರ್ಡ್ ಪುಸ್ತಕದಲ್ಲಿ ನಮೂದಿಸಬೇಕು ಎಂದು ಸೂಚನೆ ನೀಡಿದರು.